ಗದಗ

ಬಟ್ಟೂರು ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಯಡಿಯೂರು ಸಿದ್ದಲಿಂಗೇಶ್ವರ ಪಾದಯಾತ್ರೆಗಳಿಗೆ ಅತಿಥಿಸತ್ಕಾರ ಮಾದರಿಯಾದ ಕಾರ್ಯಕ್ರಮ

ಬಟ್ಟೂರು ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಯಡಿಯೂರು ಸಿದ್ದಲಿಂಗೇಶ್ವರ ಪಾದಯಾತ್ರೆಗಳಿಗೆ ಅತಿಥಿಸತ್ಕಾರ ಮಾದರಿಯಾದ ಕಾರ್ಯಕ್ರಮ
The Karthikotsava (festival of lights) at the Basaveshwara Temple in Batturu village served as an ex

                  ಲಕ್ಷ್ಮೇಶ್ವರ" 27: ಕಾರ್ತಿಕ ಮಾಸವು ಕತ್ತಲೆಯನ್ನು ಕಳೆದು ಬೆಳಕನ್ನು ಪಸರಿಸುವ ಹಾಗೂ ಭಗವಂತನ ಆರಾಧನೆಗೆ ಅತ್ಯಂತ ಪವಿತ್ರವಾದ ಮಾಸವಾಗಿದೆ ಇಂಥ ಪವಿತ್ರ ಮಾಸದಲ್ಲಿ ಆಧ್ಯಾತ್ಮಿಕ ಧರ್ಮ ಕಾರ್ಯಾಚರಣೆಗೆ ಸಾಕ್ಷಿಯಾದ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದ ಬಸವೇಶ್ವರ ಯವಕ ಮಂಡಲ ಮತ್ತು ಸಮಸ್ತ ಗ್ರಾಮದ ಜನತೆ ಪ್ರತಿ ವರ್ಷ ನಡೆದುಕೊಂಡು ಬರುತ್ತಿರುವ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಹಾಗೂ ನವಲಗುಂದ ತಾಲೂಕಿನ ಸೆಲವಡಿ ಗ್ರಾಮದಿಂದ ಯಡಿಯೂರು ಸಿದ್ದಲಿಂಗೇಶ್ವರಕ್ಕೆ ಸುಮಾರು 51 ವರ್ಷಗಳಿಂದ ಪಾದಯಾತ್ರೆ ಕೈಗೊಂಡಿರುವ ಸುಮಾರು 250 ರಿಂದ 300 ಜನರಿಗೆ ಅತಿಥಿಸತ್ಕಾರ ಕಾರ್ಯಕ್ರಮವು ನಡೆಯಿತು                       ಕಾರ್ಯಕ್ರಮ ಕುರಿತು ತಮ್ಮ ಸಂತೋಷದ ಮಾತುಗಳನ್ನಾಡಿದ ಯಡಿಯೂರು ಸಿದ್ದಲಿಂಗೇಶ್ವರನ ಪಾದಯಾತ್ರೆ ಕೈಗೊಂಡ ಈರಯ್ಯ ನಮಸ್ತೆಮಠ ಷಣ್ಮುಖಯ್ಯ ವಿರಕ್ತಮಠ ಅವರು ಕಾರ್ತಿಕೋತ್ಸವದ ನಿಮಿತ್ಯ ಬಸವೇಶ್ವರದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಸಮಸ್ತ ಗ್ರಾಮದ ಎಲ್ಲ ಗುರು ಹಿರಿಯರು ಮಹಿಳೆಯರು ತಾಯಂದಿರು ಮುದ್ದು ಮಕ್ಕಳು ಜಾತಿ ಮತ ರಥ ಎನ್ನದೆ ಒಗ್ಗಟ್ಟಾಗಿ ಶ್ರದ್ಧಾಭಕ್ತಿಯಿಂದ ದೀಪ ಹಚ್ಚುವ ಮೂಲಕ ಸಂಭ್ರಮದೊಂದಿಗೆ ಕಾರ್ತಿಕೋತ್ಸವವನ್ನು ನೆರವೇರಿಸಿದರು.

               ಪಾದಯಾತ್ರೆ ಕೈಗೊಂಡ ಎಲ್ಲ ಭಕ್ತರಿಗೆ ಸನ್ಮಾನಿಸಿ ಭೋಜನ ಉಪಚಾರ ನೆರವೇರಿಸಿ ಅವರಿಗೆ ತಂಗಲು ವ್ಯವಸ್ಥೆ ಮಾಡಿ ತಮ್ಮ ಕೈಲಾದ ಭಕ್ತಿಯ ಸಹಾಯವನ್ನು ಪಾದಯಾತ್ರೆಗಳಿಗೆ ನೀಡಿದರು ಗ್ರಾಮದ ಎಲ್ಲ ಜನರು ಸೇರಿಕೊಂಡು ರೊಟ್ಟಿ ಚಪಾತಿ ಗೋಧಿಹುಗ್ಗಿ ಜಿಲೇಬಿ ಅನ್ನ ಸಾರು ಮಿಡಚಿಯೊಂದಿಗೆ ಯಡಿಯೂರು ಸಿದ್ದಲಿಂಗೇಶ್ವರನ ಪಾದಯಾತ್ರೆ ಕೈಗೊಂಡ ಎಲ್ಲ ಭಕ್ತರಿಗೆ ಗ್ರಾಮದ ಸಮಸ್ತ ಜನತೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು ಎಲ್ಲರೂ ಪ್ರಸಾದ ಸ್ವೀಕರಿಸಿ ಪುನೀತರಾದರು ಕಾರ್ಯಕ್ರಮದಲ್ಲಿ ಬಸವೇಶ್ವರ ಯುವಕ ಮಂಡಲ ಸಮಸ್ತ ಯುವಕರು ಗ್ರಾಮದ ಎಲ್ಲ ಸಮಾಜದ ಗುರು ಹಿರಿಯರು ಮುಖಂಡರು ಮಹಿಳೆಯರು ಮುದ್ದು ಮಕ್ಕಳು ಪಾಲ್ಗೊಂಡಿದ್ದರು 


ಸುದ್ದಿ ಓದಿ