ಬೆಳಗಾವಿ

ಕೆಎಲ್‌ಇ ಹೇಲ್ತ್‌ ಗೈಡ್ ನೇರ ಫೋನ್‌-ಇನ್ ಕಾರ್ಯಕ್ರಮ ನವಜಾತ ಶಿಶುವಿನ ಆರೈಕೆ ಕುರಿತು

ಕೆಎಲ್‌ಇ ಹೇಲ್ತ್‌ ಗೈಡ್ ನೇರ ಫೋನ್‌-ಇನ್ ಕಾರ್ಯಕ್ರಮ ನವಜಾತ ಶಿಶುವಿನ ಆರೈಕೆ ಕುರಿತು

ಲೋಕದರ್ಶನ ವರದಿ 

              ಬೆಳಗಾವಿ 27 ; ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಕೇಂದ್ರ ಬೆಳಗಾವಿ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಶನಿವಾರ ದಿನಾಂಕ 28ನೆ ನವೆಂಬರ್ 2026 ರಂದು ಬೆಳಿಗ್ಗೆ 10 ರಿಂದ 11 ಗಂಟೆ ವರೆಗೆ ನವಜಾತ ಶಿಶುವಿನ ಆರೈಕೆ ಕುರಿತು ನೇರ ಫೋನ್‌-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.

             ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞೆ ಮತ್ತು ಪ್ರಾಧ್ಯಾಪಕಿ ಡಾ. ಸೋನಾಲಿ ಬಿಜ್ಜರಗ್ಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು 9019904904 ಸಂಖ್ಯೆಗೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ರೇಡಿಯೋ ಈಗ ಮೊಬೈಲ್ ಆಫ್‌ನಲ್ಲೂ ಲಭ್ಯ ಎಂದು ನಿಲಯ ನಿರ್ದೇಶಕ ಡಾ. ಸುನಿಲ್ ಜಲಾಲಪೂರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ