ಬಾಗಲಕೋಟೆ

ಕನಕದಾಸರ ಕೀರ್ತನೆಗಳು ಸಮಾಜಕ್ಕೆ ದಾರೀದೀಪ: ಗಣ್ಯರ ಅಭಿಮತ

ಕನಕದಾಸರ ಕೀರ್ತನೆಗಳು ಸಮಾಜಕ್ಕೆ ದಾರೀದೀಪ: ಗಣ್ಯರ ಅಭಿಮತ

ಲೋಕದರ್ಶನ ವರದಿ 

              ರನ್ನ ಬೆಳಗಲಿ 27 : ಪಟ್ಟಣದ ಭಕ್ತ ಕನಕದಾಸ ಸಮಾಜ ಸೇವಾ ಸಮಿತಿಯ ಆಶ್ರಯದಲ್ಲಿ ದಾಸಶ್ರೇಷ್ಠ  ಭಕ್ತ ಕನಕದಾಸರ ಜಯಂತಿಯನ್ನು ಸಡಗರ, ಸಂಭ್ರಮ ಹಾಗೂ ವೈಭವದಿಂದ ಆಚರಿಸಲಾಯಿತು. ಪಟ್ಟಣದ ಭಕ್ತ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ವೃತ್ತಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿರುವ ವಿವಿಧ ವೃತ್ತಗಳಿಗೆ ಗೌರವ ಸಲ್ಲಿಸುವ ಮೂಲಕ ಭವ್ಯ ಮೆರವಣಿಗೆ ನಡೆಯಿತು. ನೂರಾರು ಸುಮಂಗಲೆಯರಿಂದ ನಡೆದ ಕುಂಭಮೇಳ, ಝಾಂಜ್ ಪತಾಕೆ, ಡೊಳ್ಳಿನ ಮೇಳ, ಹಲಗೆವಾದನ ಹಾಗೂ ಚೌಡಕಿ ಮೇಳಗಳ ಕಲರವ ಮೆರವಣಿಗೆಯ ಮೆರುಗು ಹೆಚ್ಚಿಸಿತು.

               ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಕ್ಕಪ್ಪ ಹಾರೂಗೇರಿ ಅವರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಧರ​‍್ಪ ಸಾಂಗ್ಲಿಕರ ಮಾತನಾಡಿ, ಕನಕದಾಸರ ಬದುಕು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು. ಅವರ ಕೀರ್ತನೆಗಳು ಸಮಾಜಕ್ಕೆ ದಾರೀದೀಪವಾಗಿದ್ದು, ಮಾನವೀಯತೆ, ಸಮಾನತೆ ಹಾಗೂ ಭಕ್ತಿಯ ಸಂದೇಶ ಸಾರುತ್ತವೆ ಎಂದು ತಿಳಿಸಿದರು. ಶಿವಸೇನಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾವಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನೈತಿಕ ಮೌಲ್ಯಗಳ ಕೊರತೆಯಿಂದ ಕುಟುಂಬ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವ ಹಾಗೂ ಪರಸ್ಪರ ಸಹಕಾರ ಕುಟುಂಬ ಜೀವನಕ್ಕೆ ಭದ್ರತೆ ನೀಡಬಲ್ಲವು ಎಂದರು. 

                 ಹಿರಿಯ ಪತ್ರಕರ್ತ ಕೆ. ಬಿ. ಕುಂಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನಕದಾಸರ ಜಯಂತ್ಯುತ್ಸವವು ಅವರ ಜೀವನದ ಆದರ್ಶಗಳು, ಚಿಂತನೆಗಳು ಹಾಗೂ ಕೀರ್ತನೆಗಳ ಮಹತ್ವವನ್ನು ಸಮಾಜಕ್ಕೆ ಸಾರುವಂತಾಗಬೇಕು. ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಚಿಕ್ಕಪ್ಪ ನಾಯಕ, ರಂಗಪ್ಪ ಒಂಟಗೋಡಿ, ಅಪ್ಪನಗೌಡ ಪಾಟೀಲ, ಭೀಮಪ್ಪ ದೋಬಸಿ, ನಿಂಗಪ್ಪ ಕುಂಬಾರ, ಪ್ರವೀಣ ಪಾಟೀಲ, ಕೆಂಚಪ್ಪ ಕಂಬಳಿ, ಮುದಕಪ್ಪ ಕ್ವಾನ್ಯಾಗೋಳ, ಭರಮಪ್ಪ ಪೂಜೇರಿ, ಕರೆಪ್ಪ ಕುಂಬಾಳಿ, ಹನಮಂತ ಮಣ್ಣಿಕೇರಿ, ಈಶ್ವರ ಅಮಾತಿ, ರಾಮನಗೌಡ ಪಾಟೀಲ, ಸಿದ್ದು ಕೊಣ್ಣೂರ, ಪ್ರಕಾಶ ಕೊಣ್ಣೂರ, ಪರಮಾನಂದ ಹಿಪ್ಪರಗಿ, ಚಿನ್ನಪ್ಪ ಪೂಜಾರಿ, ಮಾದೇವ ಮೂರನಾಳ, ಗೀರೀಶ ಶಿರೋಳ ಸೇರಿದಂತೆ ಹಾಲುಮತ ಸಮಾಜದ ಮುಖಂಡರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು. 


ಸುದ್ದಿ ಓದಿ