ಬಾಗಲಕೋಟೆ

ಬನಹಟ್ಟಿಯಲ್ಲಿ 6ನೇ ವೇದಾಂತ ಪರಿಷತ್

ಬನಹಟ್ಟಿಯಲ್ಲಿ 6ನೇ ವೇದಾಂತ ಪರಿಷತ್

ಲೋಕದರ್ಶನ ವರದಿ 

            ರಬಕವಿ-ಬನಹಟ್ಟಿ 26: ಬನಹಟ್ಟಿಯ ಹಳೇ ನೀರಿನ ಟಾಕಿ ಹತ್ತಿರವಿರುವ ಶಿವಾನಂದ ಭಾರತಿ ಮಠದಲ್ಲಿ ಸಾಧು ಚಕ್ರವರ್ತಿ ವಿಶ್ವ ಕುಟುಂಬಿ. ಸಾಧು ಚಕ್ರವರ್ತಿ ಜಗದ್ಗುರು ಶಿವಾನಂದ ಭಾರತಿ ಮಹಾಸ್ವಾಮಿಗಳು ಇಂಚಲ ಇವರ ಸಮ್ಮುಖದಲ್ಲಿ 6 ನೇ ವೇದಾಂತ ಪರಿಷತ್ ಸೋಮವಾರ ದಿ. 30 ರಂದು ವಿಜೃಂಭಣೆಯಿಂದ ಜರುಗಲಿದೆ. 

          ಪರಿಷತ್‌ನಲ್ಲಿ ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮಾತೋಶ್ರೀ ಶಾಂತಮ್ಮಾ ತಾಯಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಶಿವಾನಂದ ಭಾರತಿ ಶ್ರೀಗಳ ತುಲಾಭಾರ, ಪೂಜೆ ಸೇರಿದಂತೆ ಹನುಮಾನ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ ಎಂದು ವಿರುಪಾಕ್ಷಪ್ಪ ಕೊಕಟನೂರ, ಶಂಕರ ಜಾಲಿಗಿಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ