ಕನ್ನಡ ಸಾಹಿತ್ಯವನ್ನು ಮೇರು ಪರ್ವತಕ್ಕೆರಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ : ಶಾಸಕ ಪಠಾಣ
ಲೋಕದರ್ಶನ ವರದಿ
ಶಿಗ್ಗಾವಿ27 : ಕನಕದಾಸರು ಕರ್ನಾಟಕದ ಶ್ರೇಷ್ಠ ಹರಿದಾಸ, ಕೀರ್ತನಕಾರ, ಕವಿ, ತತ್ವಜ್ಞಾನಿ ಸಂಗೀತಗಾರ ಮತ್ತು ಸಮಾಜ ಸುಧಾರಕ, ಸಮಾನತೆ ಸಂದೇಶ ಸಾರಿದವರು ಹಾಗೂ ಕನ್ನಡ ಸಾಹಿತ್ಯವನ್ನು ಮೇರು ಪರ್ವತಕ್ಕೆರಿಸಿದ ಕೀರ್ತಿಯು ದಾಸ ಶ್ರೇಷ್ಠ ಕನಕದಾಸರಿಗೆ ಸಲ್ಲುತ್ತದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.
ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕನಕದಾಸ ಜಯಂತೋತ್ಸವ ನಿಮಿತ್ಯ ಕನಕದಾಸರ ಭಾವಚಿತ್ರ ಮತ್ತು ಮಹಿಳೆಯರ ಕುಂಭಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕನಕದಾಸ ಜಯಂತಿಯು ಸಂತ ಹಾಗೂ ಮಹಾಕವಿ ಕನಕದಾಸರ ಜನ್ಮದಿನವಾಗಿದೆ. ಕನಕದಾಸರು ಕರ್ನಾಟಕದ ಶ್ರೇಷ್ಠ ಸಮಾಜ ಸುಧಾರಕರಲ್ಲಿ ಒಬ್ಬರಾಗಿದ್ದರು.
ತಮ್ಮ ಕೀರ್ತನೆ, ಸಂಗೀತಗಳ ಮೂಲಕ ಮನೆಮಾತಾಗಿದ್ದಾರೆ.ಅವರು ಅಂದು ರಚಿಸಿದಂತಹ ಸ್ತುತೀಗೀತೆಗಳನ್ನು ಜನರು ಇಂದಿಗೂ ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬರುತ್ತಿದ್ದಾರೆ. ಕನಕದಾಸರು ತಮ್ಮ ಬಾಲ್ಯದಿಂದಲೇ ಅನಿಷ್ಟ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಕಠೋರ ಪರಿಣಾಮಗಳನ್ನು ಅನುಭವಿಸಬೇಕಾಯಿತು ಎಂದರು.
ವಿರಕ್ತಮಠದ ಸಂಗನಬಸವ ಶ್ರೀಗಳು ಸಾನಿಧ್ಯವಹಿಸಿ ಆರ್ಶಿವದಿಸಿದರು. ಈ ಸಂದರ್ಭದಲ್ಲಿ ಚಂದ್ರು ಕೊಡ್ಲಿವಾಡ, ಗದಿಗೆಪ್ಪ ಕೊಡ್ಲಿವಾಡ, ಸಂಗಣ್ಣಾ ಕಂಕನವಾಡ, ಮಾಲತೇಶ ಕಂಕಣವಾಡ, ಪರುಶರಾಮ ಕುದರಿ, ಮಾಲತೇಶ ಯಲವಿಗಿ, ಗುಡ್ಡಪ್ಪ ಜಲದಿ, ಸಂತೋಷ ಚಾಕಲಬ್ಬಿ, ಪುಟ್ಟಪ್ಪ ಮತ್ತೂರ, ಗೌಸಖಾನ ಮುನಶಿ, ಶಂಭು ಆಜೂರ, ಹನುಮರೆಡ್ಡಿ ನಡುವಿನಮನಿ, ಅಣ್ಣಪ್ಪ ಲಮಾಣಿ, ರವಿ ಕೋಣಪ್ಪನವರ, ಲಕ್ಷ್ಮಿ ಕಟ್ಟಿಮನಿ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.