ಹರಿಹರ-ರಾಣೇಬೆನ್ನೂರು ಸೇರಿದಂತೆ ವಿವಿಧ ನಗರಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧನ
ರಾಣೇಬೆನ್ನೂರು:27 ಹರಿಹರ-ರಾಣೇಬೆನ್ನೂರು ಸೇರಿದಂತೆ ವಿವಿಧ ನಗರಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ ಶಹರ ಪೊಲೀಸರು, ಆತನಿಂದ 5.97ಲಕ್ಷರೂ. ಮೌಲ್ಯದ ಬೆಳ್ಳಿ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ಆರೋಪಿಯನ್ನು ಇಲ್ಲಿನ ದೊಡ್ಡಪೇಟೆಯ ಗವಾರದವರ ಓಣಿಯ ಮುಬಾರಕ್ ಅ ಮೊಟಿಯಾ ಹುಸೇನ್ ಬ್ಯಾಡಗಿ ಎಂದು ಗುರುತಿಸಲಾಗಿದೆ. ಎಸ್ಪಿ ಯಶೋಧ ವಂಟಗೋಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಶಿರಕೋಳ ಹಾಗೂ ಡಿಎಸ್ಪಿ ಲೋಕೇಶ್.ಜೆ ಇವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಶಹರ ಸಿಪಿಐ ವೆಂಕಟೇಶ್‌ಎನ್ ರವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ಪರಮೇಶ್ಡಿ.ಜಿ, ಪಿ.ಎನ್.ದೊಡ್ಡಮನಿ ಮತ್ತು ಸಿಬ್ಬಂದಿಗಳಾದ ಪಿ.ಕೆ.ಲಮಾಣಿ, ಪಿ.ಕೆ.ಸನದಿ, ಎಲ್.ಬಿ.ಕರಿಗಾರ, ಮೋಹನ ಮೇಲಗಿರಿ, ಹಾಲೇಶ್ ನಗಾವತ್, ಎಸ್.ಕೆ.ಬಿಲ್ಲಳ್ಳಿ, ಮಾರುತಿ ಹಾಲಭಾವಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.