ಬುದ್ಧಿ ಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ: ಆರೋಪಿ ಬಂಧನ
ಸಂಬರಗಿ 27: ಗ್ರಾಮದ ಗಡಿ ಪ್ರದೇಶದ ನಾಗನೂರು ಪಿ.ಎ ಗ್ರಾಮದ ಅವಿವಾಹಿತ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅದೇ ಗ್ರಾಮದ 28 ವರ್ಷದ ವಿವಾಹಿತ ವ್ಯಕ್ತಿಯೊಬ್ಬರು ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ಎರಡನೇ ಮಹಡಿಯಲ್ಲಿ ಅತ್ಯಾಚಾರ ಎಸಗಿದ್ದಾರೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿವರವಾದ ಮಾಹಿತಿ 28 ವರ್ಷದ ನಿಂಗಪ್ಪಾ ರಾಮಚಂದ್ರ ಕೋಳೇಕರ್, ಜಂಬಗಿ ಗ್ರಾಮ ದಾವಣ ಇದ್ದು ಸದ್ಯದಲ್ಲಿ ನಾಗನೂರು ಪಿ.ಎ ದಲೀ ತನ್ನ ಅಜ್ಜಿಯ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಯಾತ್ರೆ ನಡೆದಿತ್ತು. ಮೂರನೇ ದಿನ, ಆತ ಬುದ್ಧಿಮಾಂದ್ಯ ಹುಡುಗಿಯ ತೆಗೆದುಕೊಂಡು ಶಾಲಾ ಆವರಣದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಸಿಪಿಐ ಸಂತೋಷ್ ಹಳುರೂ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದರು. ಶಂಕಿತನನ್ನು ಬಂಧಿಸಲಾಗಿದೆ. ಈ ಘಟನೆಯ ಹಿಂದೆ ಯಾರು ಕೈವಾಡವಿದೆ. ಗ್ರಾಮದ ಇನ್ನೂ ಮೂವರು ಜನರನ್ನು ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ. ಹುಡುಗಿ ಅವರ ಹೆಸರು ಹೇಳಿದ್ದರಿಂದ ಪೊಲೀಸರು ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಗ್ರಾಮಗಳಲ್ಲಿ ಗೊಂದಲ ಇದ್ದಿರಬೇಕು. ಪೊಲೀಸರು ಹಲವರನ್ನು ಕೂಲಂಕಷವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಹುಡುಗಿಯ ವಶಕ್ಕೆ ಪಡೆದು ವೈದ್ಯಕೀಯ ಪರೀಶೀಲನೆ ಮಾಡಲಾಗಿದೆ ಗ್ರಾಮದಲ್ಲಿ ಬಿಗಿ ವಾತಾವರಣ ಇದೆಚಿತ್ರನಾಗನೂರಿನಲ್ಲಿ ಶಂಕಿತ ಆರೋಪಿ ನಿಂಗಪ್ಪ ಕೋಳಿಕರ್ ಮಾಡಿದ ಅಪರಾಧದ ಸ್ಥಳವನ್ನು ಪೊಲೀಸ್ ಅಧಿಕಾರಿಗಳು ಪರೀಶೀಲಿಸುತ್ತಿದ್ದಾರೆ.