ಮಹಲಿಂಗಪುರ

ಶ್ರೀ ಚಕ್ರವನ್ನು ಪರಿಶುದ್ಧ ಭಕ್ತಿಯಿಂದ ಪೂಜಿಸಿದರೆ ನೆಮ್ಮದಿ ಬದುಕು ನಮ್ಮದಾಗುತ್ತದೆ : ಉಪಸಭಾಪತಿ ಉಮಾಶ್ರೀ

ಶ್ರೀ ಚಕ್ರವನ್ನು ಪರಿಶುದ್ಧ ಭಕ್ತಿಯಿಂದ ಪೂಜಿಸಿದರೆ ನೆಮ್ಮದಿ ಬದುಕು ನಮ್ಮದಾಗುತ್ತದೆ : ಉಪಸಭಾಪತಿ ಉಮಾಶ್ರೀ

ಲೋಕದರ್ಶನ ವರದಿ 

            ಮಹಾಲಿಂಗಪುರ 27 : ದೇವರಿಗೆ ಭಯ ಭಕ್ತಿಯಿಂದ ಪೂಜಿಸುವದು ನಮ್ಮ ಸಂಸ್ಕೃತಿ ಅದರಲ್ಲೂ ಶ್ರೀ ಚಕ್ರವನ್ನು ನಾಡಿನ ಶಕ್ತಿ ದೇವತೆಗಳ ಪೀಠಗಳಲ್ಲಿ ಸ್ಥಾಪಿಸಿ ಪೂಜಿಸುವುದರಿಂದ ಅನೇಕ ತರಹದ ಲಾಭಗಳು ಲಭಿಸುತ್ತವೆ. ಯಾರು ಶುದ್ಧವಾದ ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ  ಚಕ್ರವು ಸಕಲವನ್ನು ಕರುಣಿಸಿ ನಮ್ಮ ಬದುಕಿಗೆ ನೆಮ್ಮದಿ ನೀಡುತ್ತದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಉಮಾಶ್ರೀ ಹೇಳಿದರು. 

           ನಗರದ  ಬನಶಂಕರಿ ದೇವಸ್ಥಾನದಲ್ಲಿ ನಡೆದ ಶ್ರೀ ಚಕ್ರದ ಒಂಬತನೇ ಮಂಡಲದ ಪೂಜಾ ಕಾರ್ಯಕ್ರಮನ್ನು ನೆರವೇರಿಸಿ ಮಾತನಾಡಿ. ಇಂದಿನ ಆದುನಿಕ ಯುಗದಲೂ ಭಾರತೀಯ ಸಂಸ್ಕೃತಿ ಉಳಿದಿದೆ ಅಂದರೆ ಅದು ಅಧ್ಯಾತ್ಮ ಕ್ಷೇತ್ರದಲ್ಲಿ ಅದಕ್ಕಾಗಿ ನಾವು ನಿತ್ಯ ಜೀವನದಲ್ಲಿ ಅಧ್ಯಾತ್ಮ ಅಳವಡಿಸಿಕೊಂಡರೆ.

              ನಮ್ಮ ಜೀವನದಲ್ಲಿ ಏನೇ ಬಂದರು ಆತ್ಮವಿಶ್ವಾಸ ಎದುರಿಸಲು ನಮ್ಮ ಮಕ್ಕಳಿಗೆ ಸಂಸ್ಕಾರ ಕೊಡುವುದು ಬಹಳ ಮುಖ್ಯವಾಗಿದೆ. ಮಕ್ಕಳಿಗೆ ಆತ್ಮವಿಶ್ವಾಸದಿಂದ್ ಬದುಕುವುದನ್ನು ಕಲಿಸಿ. ಸಂಪತ್ತು, ಸಮೃದ್ಧಿ, ಖ್ಯಾತಿ, ಯಶಸ್ಸು, ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ನೀಡಿ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸುತ್ತದೆ ಎಂದರು.  

             ಮಂಡಲ ಪೂಜೆ : ಇಂದಿನ ಒಂಬತನೇ ಮಂಡಲ ಪೂಜ್ಯಯಲ್ಲಿ ಮುತೈದೆಯರ ಉಡಿತುಂಬುವದು  ಚಕ್ರಕ್ಕೆ ಕುಂಕುಮಾರ್ಚನೆ ಮಾಡುವುದು, ಲಲಿತಾ ಸಹಸ್ರನಾಮ ಪಟನೆ, ದೇವಿ ಆಹ್ವಾನ, ಗಣೇಶ ಪೂಜೆ, ಸಪ್ತ ನದಿಗಳ ತೀರ್ಥವನ್ನು ಮಂತ್ರದಿಂದ ಆಹ್ವಾನೇ ಮಾಡಿ   ಚಕ್ರ ಪೂಜಿಸಿ ಕ್ರತಾರ್ಥರಾದರು. ನಂತರ ಮಹಾಮಂಗಳಾರತಿಯೊಂದಿಗೆ ಮಹಾಪ್ರಸಾದ ಜರುಗಿತು. 


ಸುದ್ದಿ ಓದಿ