ನಾಳೆ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ
ಲೋಕದರ್ಶನ ವರದಿ
ಮಹಾಲಿಂಗಪುರ 28: ಪಟ್ಟಣದ ಬಸವ ಬಳಗ ಹಾಗೂ ಬಸವ ಸಮಿತಿ ವತಿಯಿಂದ 200 ನೇ ತಿಂಗಳ “ಮನೆ ಮನೆಯಲ್ಲಿ ಮಹಾಮನೆ” ಕಾರ್ಯಕ್ರಮ ನ.30, ಸೋಮವಾರ ಸಂಜೆ 6.30ಕ್ಕೆ ಸ್ಥಳೀಯ ಮಹಾಂತೇಶ ನಗರದಲ್ಲಿರುವ ಸಂಜು ಶಿರೋಳ ಅವರ ನಿವಾಸದಲ್ಲಿ ಜರುಗಲಿದೆ.
ಮಾಸಿಕ ‘ಮನೆ ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ 200 ನೇ ಮೈಲಿಗಲ್ಲನ್ನು ತಲುಪುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಈ ವಿಶೇಷ ವಚನ ಚಿಂತನೆ ಹಾಗೂ ಸತ್ಸಂಗ ಕಾರ್ಯಕ್ರಮದಲ್ಲಿ ವಚನ ಗಾಯನ, ಶರಣ ಗೋಷ್ಠಿ, ಬಸವ ಪ್ರಾರ್ಥನೆ ಜರುಗುವುದು. ಹಾಗಾಗಿ ಎಲ್ಲ ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಮಿತಿ ಸಂಚಾಲಕ ಬಸವರಾಜ ಮೇಟಿ ತಿಳಿಸಿದ್ದಾರೆ.