ಗದಗ

23 ವರ್ಷಗಳ ಸೈನ್ಯ ಸೇವೆ ಬಳಿಕ ತಾಯ್ನಾಡಿಗೆ ಎಂ.ಎಂ. ಹೆಬ್ಬಳ್ಳಿ

23 ವರ್ಷಗಳ ಸೈನ್ಯ ಸೇವೆ ಬಳಿಕ ತಾಯ್ನಾಡಿಗೆ ಎಂ.ಎಂ. ಹೆಬ್ಬಳ್ಳಿ

ಗದಗ 29 : ಭಾರತೀಯ ಸೈನ್ಯದಲ್ಲಿ ಕಳೆದ 23 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದ ಮೈಬುಸಾಬ ಎಂ. ಹೆಬ್ಬಳ್ಳಿ ಅವರು ಡಿಸೆಂಬರ್ 1 ರಂದು ಮಂಗಳವಾರ ಸ್ವಗ್ರಾಮ, ಗದಗ ತಾಲ್ಲೂಕಿನ ಹುಯಿಲಗೋಳ ಗ್ರಾಮಕ್ಕೆ ಮರಳುತ್ತಿದ್ದಾರೆ.  

ಜಮ್ಮು-ಕಾಶ್ಮೀರ, ಪಂಜಾಬ, ರಾಜಸ್ಥಾನ ಸೇರಿ ದೇಶದ ಗಡಿ ಪ್ರದೇಶಗಳಲ್ಲಿ ಭಾರತ ಮಾತೆಯ ಸೇವೆ ಮಾಡಿ, ಇದೀಗ ‘ಹವಾಲ್ದಾರ’ ಹುದ್ದೆಯೊಂದಿಗೆ ತಾಯ್ನಾಡಿಗೆ ಮರಳುತ್ತಿದ್ದಾರೆ.  

ದೇಶದ ರಕ್ಷಣೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಅವರು ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಗ್ರಾಮವನ್ನು ಪ್ರವೇಶಿಸಲಿದ್ದು, ಈ ವೇಳೆ ಅವರನ್ನು ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಆತ್ಮೀಯವಾಗಿ ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ. 

ವೀರ ಯೋಧ ಮೈಬುಸಾಬ ಎಂ. ಹೆಬ್ಬಳ್ಳಿ ಅವರನ್ನು ಸ್ವಾಗತಿಸಲು ಗದಗ ಸೇರಿ ಸ್ವಗ್ರಾಮ ಹುಯಿಲಗೋಳದಲ್ಲಿ ಬ್ಯಾನರ್, ಬಂಟಿಂಗ್ಸ್‌ ಮೂಲಕ ಸ್ವಾಗತ ಕೋರುತ್ತಿದ್ದಾರೆ. 


ಸುದ್ದಿ ಓದಿ