ಸದ್ಭಾವ ಯೋಗ ಗ್ರಂಥ ಲೋಕಾರೆ್ಣ. ಸಂಸ್ಕಾರ ಶ್ರೀಮಂತಿಕೆ ಇರಬೇಕು: ನಿರ್ಭಯಾನಂದ ಶ್ರೀಗಳು
ಚಡಚಣ 29: ತಾಯಿ, ತಂದೆ, ಗುರು, ಉತ್ತಮ ಪರಿಸರ ಉತ್ತಮ ಕವಿಗಳ , ಸಾಹಿತಿಗಳ ಸಂಪರ್ಕ ದಿಂದ ಉತ್ತಮ ಸಂಸ್ಕಾರ ಪಡೆದ ಕುಟುಂಬ ಈ ಗುಮಸ್ತೆ ಕುಟುಂಭ ಸಂಸ್ಕಾರ ಶ್ರೀಮಂತಿಕೆ ಹೊಂದಿದ ಕಟುಂಭ ಎಂದು ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿ ಹೇಳಿದರು. ಶನಿವಾರ ದೇವರ ನಿಂಬರಗಿ ಗ್ರಾಮದ ಮಹೇಶ ಗುಮಾಸ್ತೆ ಅವರು ರಚಿಸಿದ ಸದ್ಭಾವ ಯೋಗ ಹಾಗೂ ಸಾತ್ವಿಕ ಚಿಂತಕಿ ಎಂಬ ಎರಡು ಅವರ ಪುಸ್ತಕ ಲೋಕಾರೆ್ಣಗೊಳಿಸಿ ಹಾಗೂ ಕಮಲಾ ರವೀಂದ್ರ ಗುಮಾಸ್ತೆ ಅವರ 60 ವರ್ಷದ ಹುಟ್ಟುಹಬ್ಬ ಆಚರಣೆಯಲ್ಲಿ ಅವರು ಮಾತನಾಡಿದರು.ನಮ್ಮ ಹುಟ್ಟಹಬ್ಬ ಸಾರ್ವಜನಿಕ ಸಮಾರಂಭವಾದವಾದಾಗ ಹುಟ್ಟಿ ಸಾರ್ಥಕವಾಗುತ್ತದೆ. ಸತ್ತು ಹೋಗುವ ಒಂದು ಕಂಪನಿ ಎಷ್ಯದ ಅತ್ಯಂತ ಅಗ್ರ ಗಣ್ಯ ಸ್ಥಾನಕ್ಕೆ ಇರಲು ಕಾರಣಿಕರ್ತಾರದ ರವೀಂದ್ರ ಗುಮಸ್ತೆ ಅವರ ಕಾರ್ಯಾ ಸ್ಲಾಘನೀಯ ಎಂದರು.ಸಾಹಿತಿ ಸುರೇಶ ಕುಲಕರ್ಣಿ ಮಾತನಾಡಿ, ಸಮಾಜಕ್ಕೆ ಒಳ್ಳೆಯದಾಗುವಂತೆ ರಚನೆ ಮಾಡಿರುವ ಪುಸ್ತಕಗು ಯಾವಾಗಲೂ ಒಂದು ಚಿರಂಜೀವಿ ಇದ್ದ ಹಾಗೆ. ಅದನ್ನು ಸ್ಪೂರ್ತಿದಾಯಕವಾಗಿ ಓದಿ ಆನಂದಿಸಿ. ಭಾಷೆಯ ಮೂಲಕವಾಗಲೀ,
ಅಭಿನಯದ ಮೂಲಕವಾಗಲೀ ಹಾಗೂ ಕಲೆಯ ಮೂಲಕವಾಗಲೀ ಈ ಮೂರು ರೂಪದಲ್ಲಿ ಸಮಾಜದ ಸುಧಾರಣೆಯಾಗುವಂತೆ ಇರಬೇಕು. ಸಮಾಜ ಸುಧಾರಣೆ, ಸಂಸ್ಕೃತಿ ಪ್ರತಿಬಿಂಬಿಸುವ ಹಾಗೂ ದುಷ್ಟ ಶಕ್ತಿಗಳಿಂದ ದೂರವಿರುವ ಗ್ರಂಥ ಲೋಕಾರೆ್ಣ ಮಾಡುವುದರ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವುದು ಅತ್ಯಂತ ಅದ್ಬುತ ಕೆಲಸ ಎಂದರು.ಕಿರ್ಲೋಸ್ಕರ್ ಕಂಪನಿಯ ಎಂ.ಡಿ ರವೀಂದ್ರ ಗುಮಾಸ್ತೆ ಮಾತನಾಡಿ, ಸಾಹಿತಿ ದ.ರಾ ಬೇಂದ್ರೆ ಅವರ ವಡನಾಟಿನಲ್ಲಿ ಬಂದಿರುವ ನಮ್ಮ ಕುಟುಂಬ. ಅದರಲ್ಲಿ ಪೂಜೆ ಹಾಗೂ ಪಾದ ಮೂಜೆಯಲ್ಲಿರು ನಂಬಿಕೆಗಿಂತಾ ಹೆಚ್ಚು ಮಾನವೀಯತೆ, ಸಮಾಜ ಸುಧಾರಣೆ ಮಾಡುವದರಲ್ಲಿ ಅಳವಡಿಕೊಳ್ಳುವುದು ನನ್ನ ದ್ಯೇಯವಾಗಿದೆ ಎಂದ ಅವರು, ಮೊದಲು ಗುರಿ ಮುಖ್ಯ ಅದನ್ನು ಸನ್ಮಾರ್ಗದಲ್ಲಿ ಗುರಿ ಸಾಧಿಸು, ಗುರಿ ಸಾಧಿಸಲು ಒಳ್ಳೆಯ ಗುರು ಸಿಕ್ಕಾಗ ಜೀವನ ಸಾರ್ಥಕ ವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ನಿವೃತ್ ಮುಖ್ಯ ಶಿಕ್ಷಕ ಕೃಷ್ಣಾಜಿ ಜ್ಯೋಷಿ, ಕಮಲಾ ಗುಮಾಸ್ತೆ, ಭಾರತಿ ಗುಮಾಸ್ತೆ, ಪುಲಕೇಶಿ ಗಲಗಲಿ, ಕವಿತಾ ದೇಶಪಾಂಡೆ, ಅಶೋಕ ನಾಡಗೌಡ, ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಹಾವಿನಾಳ ಗ್ರಾ.ಪಂ ಮಾಜಿಅಧ್ಯಕ್ಷ ರಾಜೂ ಶಿಂಘೆ, ಎಲ್ ಎಮ್ ಭೂಸನೂರ, ಉಮೇಶ ದೇಸಾಯಿ, ಸಾಹಿತಿ ಶೇಖ ಸೇರಿದಂತೆ ಇದ್ದರು.ಅಜಿತ ಜೋಷಿ ನಿರೂಪಿಸಿದರು, ಪಿ. ವ್ಹಿ ಗುಮಾಸ್ತೆ ಸ್ವಾಗತಿಸಿದರು, ಪೂಜಾ ಗುಪ್ತಾ ವಂದಿಸಿದರು.