ವಿಜಯಪುರ

ವೃಕ್ಷಥಾನ್ ಹೆರಿಟೇಜ್ ರನ್‌-2026 ಅಂಗವಾಗಿ ಮಕ್ಕಳ ಓಟ: 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ, ವಿಜೇತರಿಗೆ ನಗದು ಬಹುಮಾನ

ವೃಕ್ಷಥಾನ್ ಹೆರಿಟೇಜ್ ರನ್‌-2026 ಅಂಗವಾಗಿ ಮಕ್ಕಳ ಓಟ: 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಉತ್ಸಾಹಭರಿತ ಪಾಲ್ಗೊಳ್ಳುವಿಕೆ, ವಿಜೇತರಿಗೆ ನಗದು ಬಹುಮಾನ
Children’s Run as part of Vrukshathan Heritage Run-2026: Enthusiastic participation by over 1,200 st

            ವಿಜಯಪುರ  28: ಡಿ.13ರಂದು ನಡೆಯುವ ವೃಕ್ಷಥಾನ್ ಹೆರಿಟೇಜ್ ರನ್ ನಿಮಿತ್ತ ಇಂದು ಶನಿವಾರ ಇಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ’ವೃಕ್ಷ ಮಕ್ಕಳ ಓಟ’ ನಡೆಯಿತು.ಬೆಳಗ್ಗೆ ಏಳು ಗಂಟೆಗೆ ಜಿಲ್ಲೆಯ ಎಲ್ಲ ಶಾಲೆಗಳ ನರ್ಸರಿಯಿಂದ ಹಿಡಿದು ಐದನೆಯ ತರಗತಿ ಮಕ್ಕಳಲ್ಲದೇ ಬೇರೆಡೆಯಿಂದ ಬಂದ ಚಿಣ್ಣರು ಕೂಡ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

            ಸಾಹಾಯಕ ಆಯುಕ್ತೆ ಜುಫಿಷಾನ್ ಹಕ್ ಮಕ್ಕಳ ಓಟಕ್ಕೆ ಹಸಿರು ನಿಶಾನೆ ತೋರಿ, ಶುಭಹರಸಿದರು.ವೃಕ್ಷಥಾನ್ ಹೆರಿಟೇಜ್ ರನ್‌- 2026 ಅಂಗವಾಗಿ ಇದು ಪೂರ್ವಭಾವಿ ಓಟವಾಗಿದ್ದು, ಸರಕಾರಿ, ಅನುದಾನಿತ-ಅನುದಾನ ರಹಿತ ಶಾಲೆಗಳ ಸುಮಾರು ಹನ್ನೆರಡು ನೂರು ಮಕ್ಕಳು ಭಾಗವಹಿಸಿದ್ದರು.

           ದಾವಣಗೆರೆ, ಶಿವಮೊಗ್ಗ, ಸೊಲ್ಲಾಪುರ, ಜಮಖಂಡಿ ಹಾಗೂ ಬಾಗಲಕೋಟೆಯಲ್ಲದೇ ಅನೇಕ ಕಡೆಯ ಶಾಲೆಗಳ ಮಕ್ಕಳು ಸ್ವಯಂ ಪ್ರೇರಣೆಯಿಂದ ಓಡಿದ್ದು ವಿಶೇಷವಾಗಿತ್ತು. 400 ಮೀಟರ್ ಓಟದಲ್ಲಿ ಮೊದಲು ಬಂದವರಿಗೆ 10 ಸಾವಿರ ರೂ., 200 ಮೀಟರ್‌ಗೆ ಐದು ಸಾವಿರ ಹಾಗೂ 100 ಮೀಟರ್ ಓಟಕ್ಕೆ ಎರಡೂವರೆ ಸಾವಿರ ರೂ. ಬಹುಮಾನಗಳನ್ನು ಗೆದ್ದವರನ್ನು ಆಯ್ಕೆ ಮಾಡಲಾಯಿತು.  

             ಸಮಾಧಾನಕರ ಬಹುಮಾನವಾಗಿ 2,500, 1,000 ಹಾಗೂ ಐದು ನೂರು ರೂ. ಬಹುಮಾನವನ್ನು ವೃಕ್ಷಥಾನ್‌ನ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ನರ್ಸರಿ, ಎಲ್‌.ಕೆ.ಜಿ ಮಕ್ಕಳಿಗೆ ನೂರು ಮೀಟರ್ ಓಟ ಏರಿ​‍್ಡಸಲಾಗಿತ್ತು. ಹುಡುಗ ಮಹುಗಿಯರಿಗೆ ಪ್ರತ್ಯೇಕ ಬಹುಮಾನ ಕೊಡಲಾಗುತ್ತಿದೆ.ವಿಜೇತರ ಪಟ್ಟಿ ಹೀಗಿದೆ;ನೂರು ಮೀಟರ್ ಓಟದಲ್ಲಿ ಶಾಂತಾ ಮುಧೋಳ, ಸುಕನ್ಯಾ, ಅನುಶ್ರೀ,

                 ಅಮರ್ಯಾ ಹಾಗೂ ಗೌರಮ್ಮ. ಹುಡುಗರ ವಿಭಾಗಕ್ಕೆ ನರೇಂದ್ರ ಕಾತರಕಿ, ರಾಹುಲ್, ಆಶಾನ್ ಕಲಾದಗಿ, ಅಮೀನ್ ಶೇಖ್, ಅನ್ಶ್‌ಗೌಡ ಪಾಟೀಲ ಕ್ರಮವಾಗಿ ವಿಜೇತರು. 200 ಮೀಟರ್ ನಲ್ಲಿ ಸಮೃದ್ಧಿ, ತ್ರಿಶಾ ರೇವೂರ, ಶ್ರಾವ್ಯಾ ಸಿಂಗಿ, ಶಿರಿನ್, ದಾನೇಶ್ವರಿ, ಆಕಾಶ್, ಪವನ್ ಡಿ., ಅಪ್ಪು ತುಪ್ಪದ, ಅಫ್ತಾಬ್, ರುತ್ವಿಕ್ ಮಠಪತಿ ಹಾಗೂ 400 ಮೀಟರ್ ಓಟದಲ್ಲಿ ಪ್ರಿಯಾ ಮಠದ್, ರಿಯಾ, ತ್ರಿಶಿಕಾ, ಸಂಸ್ಕೃತಿ ಕುಂಬಾರ, ಐಶ್ವರ್ಯ ರಾಠೋಡ, ಪವನ್ ಅಮೋಜಿ, ಸ್ಪರ್ಶ್‌ ಅಂಬಿಗೇರ, ವೈಭವ ಡಿ., ಹಾಗೂ ಆದಿತ್ಯ ರಜಪೂತ ವಿಜೇತರಾಗಿದ್ದಾರೆ.

               ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ಕಾಣಿಸುವ ಕಣ್ಣಿನ ಸಮಸ್ಯೆ ಮಯೋಪಿಯಾ ಉಚಿತ ತಪಾಸಣೆ ಶಿಬಿರ ಕೂಡ ನಡೆಯಿತು. ಟಾಟಾ ಕಂಪನಿಯ ಟಾಟಾ ಐ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವೃಕ್ಷಥಾನ್ ಸಂಚಾಲಕ ಡಾ.ಮುರುಗೇಶ ಪಟ್ಟಣಶೆಟ್ಟಿ, ವಿಡಿಎ ಅಧ್ಯಕ್ಷರಾದ ಡಾ.ಗಂಗಾಧರ ಸಂಬಣ್ಣಿ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕ್ರೀಡಾ ಇಲಾಖೆಯ ರಾಜಶೇಖರ ದೈವಾಡಗಿ, ಉಸ್ತುವಾರಿಗಳಾದ ಅಮಿತ್ ಬಿರಾದಾರ, ಶಿವಾನಂದ ಕುಂಬಾರ ಹಾಗೂ ಶಾಲೆಗಳ ದೈಹಿಕ ಶಿಕ್ಷಕರು, ಶಿಕ್ಷಕಿಯರು ಇದ್ದರು. 


ಸುದ್ದಿ ಓದಿ