ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಪ್ರತಿಯೊಬ್ಬರಿಗೂ ತಿಳಿಸಿ: ಮಾಜಿ ವಿ.ಪ ಸದಸ್ಯ ಅರುಣ ಶಹಾಪುರ.
ದೇವರ ಹಿಪ್ಪರಗಿ 27 : ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕೆ ಸಾಥ್, ಸಬ್ ಕಾ ವಿಕಾಸ್ ಎನ್ನುವಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಿಂದ ಮತ್ತಷ್ಟು ಬಲಪಡಿಸುವುದು, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳು ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಮಾಜಿ ವಿ.ಪ ಸದಸ್ಯ ಅರುಣ ಶಹಾಪುರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ದೇವರಹಿಪ್ಪರಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ದೇವರ ಹಿಪ್ಪರಗಿ ಹಾಗೂ ಹೂವಿನ ಹಿಪ್ಪರಗಿ ಮಂಡಲದ ಸಭೆ ನಡೆಸಿ ನೂತನ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆ ಬಲವರ್ಧನೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಬರುವಂತ ಚುನಾವಣೆಗಳಾದ ಗ್ರಾಪಂ, ತಾಪಂ, ಜಿಪಂ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು,
ದೇಶದಲ್ಲಿ ಅತಿ ಹೆಚ್ಚು ಜನಪ್ರತಿನಿಧಿಗಳ ಹೊಂದಿರುವ ಪಕ್ಷ ಬಿಜೆಪಿಯಾಗಿದೆ,ಕಾಂಗ್ರೆಸ್ ಪಕ್ಷ ಬೆರಳೆಣಿಕೆಯಷ್ಟು ಮಾತ್ರ, ಕರ್ನಾಟಕ ಎಟಿಎಂ ಆಗಿದೆ ಬಳಸಿಕೊಳ್ಳುತ್ತಿದೆ.
ಕ್ಷೇತ್ರದಲ್ಲಿ ಎರಡು ಮಂಡಲ ರಚನೆಗೆ ರಾಜ್ಯಾಧ್ಯಕ್ಷರ ಜೊತೆ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರು ಪ್ರಯತ್ನದಿಂದ ಆಗಿದೆ, ಮೇತ್ರಿ ಧರ್ಮ ಪಾಲಿಸಿ ಸಂಘಟನೆಯನ್ನು ಬಲಪಡಿಸಬೇಕು.
ಮತ್ತೊಮ್ಮೆ ರಾಜ್ಯ ಹಾಗೂ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಬರುವುದು ಶತಸಿದ್ಧ ಎಂದು ಹೇಳಿದರು.ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರು ವಹಿಸಿದ್ದರು.ಜಿಲ್ಲಾ ಒಬಿಸಿ ಅಧ್ಯಕ್ಷ ಸಿದ್ದು ಬುಳ್ಳಾ ಸೇರಿದಂತೆ ಹಲವಾರು ಜನ ಮುಖಂಡರು ಮಾತನಾಡಿ,ಹೊಸ ಪದಾಧಿಕಾರಿಗಳ ಜೋತೆ ಕೈಜೋಡಿಸಿ ಕೆಲಸ ಮಾಡೋಣ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಮಾಜಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದ್ದರೆಡ್ಡಿ,ಮುಖಂಡರುಗಳಾದ ಸೋಮು ಹಿರೇಮಠ,
ಮಹಾಂತೇಶ ಬಿರಾದಾರ, ಪ್ರಕಾಶ ದೋಡಮನಿ, ಸೋಮು ದೇವೂರ, ವಿನೋದ ಚವ್ಹಾಣ, ಸಂಗನಗೌಡ ಪಾಟೀಲ, ಭೀಮನಗೌಡ ಲಚ್ಯಾಣ, ಬಸವರಾಜ ಕಲ್ಲೂರ, ಗುರುನಾಥ ಮುರಡಿ, ಮಾಯಾದೇವಿ ಪಾಟೀಲ,ಸಾಯಿಬಣ್ಣ ಆಲ್ಯಾಳ, ಶ್ರೀಮಂತ ತಳವಾರ, ವಿಠ್ಠಲ ಯಂಕಂಚಿ,ಮ ಮಲ್ಲನಗೌಡ ಬಿರಾದಾರ, ಶ್ರೀಶೈಲ ಕಬ್ಬಿನ, ಪ್ರಕಾಶ ಡೋಣೂರಮಠ, ರಮೇಶ ಇಳಗೇರ, ರಮೇಶ ಹಂಚಲಿ, ಸದ್ದಾಂ ಮಕ್ಕುಬಾಯಿ,ವಿದ್ಯಾಧರ ಸಂಗೋಗಿ, ಹುಸೇನ ಗೌಂಡಿ,ಕಾಶಿರಾಯ ವಾಡೇದಮನಿ,ಮಾಂತೇಶ ಗುಡಿಮನಿ,ಶ್ರೀಧರ ನಾಡಗೌಡ, ಮಲಕಪ್ಪ ಬಾಗೇವಾಡಿ,ಕಲ್ಮೇಶ ಬುದ್ನಿ ಸೇರಿದಂತೆ ಹಲವಾರು ಜನ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.