ಆಲಮೇಲದಲ್ಲಿ ಬಸವ ಸಮಿತಿ ಮತ್ತು ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಆಲಮೇಲ 28 : ಪಟ್ಟಣದ ಬಸವಣ್ಣನವರ ಅವಹೇಳನಕಾರಿ ಖಂಡಿಸಿ ಬೆಳಗ್ಗೆ 10.ಗಂಟೆಗೆ ವಿರಕ್ತಮಠ ದಿಂದ ಪ್ರಮುಖ ಬೀದಿಗಳ ಮುಖಾಂತರ ಅಂಬೇಡ್ಕರ್ ಸರ್ಕಲವರಿಗೆ ಬೃಹದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಜಗಜ್ಯೋತಿ ಬಸವಣ್ಣನವರ ಬಗ್ಗೆ ಕಳ್ಳ. ಸುಳ್ಳುಗಾರ. ದರೋಡೆಕೋರ. ಕ್ರಾಂತಿಯೋಗಿ ಬಸವಣ್ಣನವರ ಬಗ್ಗೆ ಹವಹೇಳನಕಾರಿ ಪುಸ್ತಕ ಬರೆದ. ರವಿ ಹಂಜ್ ಒಬ್ಬ ವಿಕೃತಿ ಮನಸುಳ್ಳ ಲೇಖಕ. ಬಸವನಾಡಿನ ಜನತೆಗೆ ಇದು ಒಂದು ಅತ್ಯಂತ ನೋವಾದ ಸಂಗತಿ. ಈ ಲೇಖಕನ ಮೇಲೆ ಅತಿ ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿ ವಿವಿಧ ಸಂಘನಿಂದ್ ಪ್ರತಿಭಟನೆ ಮಾಡಲಾಯಿತು.
"ಇವನಾರವ. ಇವನಾರವ. ಇವನಾರವನೆಂದೆ ನಿಸದಿರಯ್ಯ್ ಇವ ನಮ್ಮವ. ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ" ವಚನಗಳು ಜಗತ್ತಿಗೆ ಸಾರಿದ ಬಸವಣ್ಣನವರು ಜಾತಿ ಧರ್ಮ ಕುಲ ಹೋಗಲಾಡಿಸಿ ಏಕತೇ ಸಾರಿದ ವಿಶ್ವಗುರು ಬಸವಣ್ಣ ಬಗ್ಗೆ ಇಲ್ಲ ಸಲ್ಲದ ಆರೋಪವನ್ನು ಖಂಡಿಸಿ. ಇದು ಬಸವಣ್ಣನವರ ಲಿಂಗಾಯಿತ ಧರ್ಮಕ್ಕೆ ಅನ್ಯಾಯವಾಗಿದೆ. ಎಂದು ನಾನಾಗೌಡ್ ಪಾಟೀಲ್ ಹೇಳಿದರು.ಪರಮಪೂಜ್ಯ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹಿಕ್ಕಣಗುತ್ತಿ. ಮಲ್ಲಿ ಬೊಮ್ಮಯ್ಯ ಸ್ವಾಮಿಗಳು ವಿಭಕ್ತಿ ಮಠ ಆಲಮೇಲ.
ಶ್ರೀಶೈಲಯ್ಯ ಸ್ವಾಮಿಗಳು ಅಳ್ಳೋಳ್ಳಿ ಮಠ ಆಲಮೇಲ ಮಾತನಾಡಿದರು. ಪ್ರಭು ವಾಲಿಕಾರ ಬಸವಣ್ಣನವರು ಜ್ಞಾನದ ಭಂಡಾರವನ್ನು ಹೊತ್ತು ವಿಶ್ವಕ್ಕೆ ಸಾರಿದ ಏಕೈಕ ಮಹಾನ್ ಜಗಜ್ಯೋತಿ ಬಸವಣ್ಣ ಯಾವದೇ ಧರ್ಮಕುಲಕ್ಕೆ ಅನ್ಯಾಯ ಮಾಡದೆ 12ನೇ ಶತಮಾನದ ಮಹಾನ ನಾಯಕನ ಬಗ್ಗೆ ಇಂಥ ಅವಹೇಳನಕಾರಿ ಹೇಳುವುದು ಸರಿಯಲ್ಲ ತಕ್ಷಣ ಅವನನ್ನು ಬಂಧಿಸಿ ಗಲ್ಲಿಗೇರಿಸಬೇಕು ಎಂದು ಹೇಳಿದ್ದರು.ನಾಗರಿಕ ವೇದಿಕೆ ಅಧ್ಯಕ್ಷ ರಮೇಶ್ ಬಂಟನೂರ ಮಾತನಾಡಿದರು.
ಆಲಮೇಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಧಿಕ್ ಸುಂಬುಡ ಮಾತನಾಡಿ ಆಲಮೇಲದಲ್ಲಿ ಜಾತಿ ಭೇದ ಮರೆತು ವಿಶ್ವ ಜಗಜ್ಯೋತಿ ಬಸವಣ್ಣನವರಿಗೆ ಅನ್ಯಾಯ ಅಥವಾ ಅವಹೇಳನಕಾರಿ ಬರೆದಿರುವ ಲೇಖಕನಿಗೆ ಸರಕಾರದಿಂದ ಕಾನೂನು ಕ್ರಮ ಕೈಗೊಳ್ಳಬೇಕು.ಒಂದು ವೇಳೆ ಕೈಗೊಳ್ಳದಿದ್ದರೆ. ಅವನನ್ನು ಭೀಮಾ ತೀರದ ಮಡಿಲಿಗೆ ಒಪ್ಪಿಸಿದರೆ ನಾವು ಅವನಿಗೆ ಶಿಕ್ಷೆ ಕೊಡಲು ರಡಿ. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಕರ್ನಾಟಕ ಬಂದ ಮಾಡಿ ಉಗ್ರವಾದ ಹೋರಾಟ ಕೈಗೊಳ್ಳುತ್ತೇವೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಮರ ಬಿಳವಾರ.ಆಲಮೇಲ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಬಸವರಾಜ್ ತೇಲ್ಲೂರ. ವ್ಯಾಪಾರ ಸಂಘದ ಅಧ್ಯಕ್ಷ ದೇವಪ್ಪ ಗುಣಾರಿ. ಪ ಪಂ ಉಪಾಧ್ಯಕ್ಷ ಚಂದು ಹಳಿಮನಿ.ಶ್ರೀಮತಿ ಶೈಲಾ ಹೊಸಮನಿ.ಗೌರಮ್ಮ ಬಜಾರ್.ಅಪ್ಪು ಶೆಟ್ಟಿ. ಪಟ್ಟಣ ಪಂಚಾಯತಿ ಸದಸ್ಯರಾದ. ಭಾಗ್ಯವಂತ ಆಲಮೇಲಕರ. ಬಾಬು ಕೊತಂಬರಿ.ಹರೀಶ್ ಯಂಟಮನ. ಪೋಲಿಸ್ ಸಿಬ್ಬಂದಿ ಹುಚ್ಚಪ್ಪ ಗೋಡೆಕರ್ ಅನೇಕರು ಇದ್ದರು.