ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ
ದೇವರಹಿಪ್ಪರಗಿ 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಿರುವ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.ಸಭೆಯಲ್ಲಿ ತಾಲೂಕು ಯೋಜನಾಧಿಕಾರಿ ಬಿನೋಯ್ ಮಾತನಾಡಿ, ಪೂಜಾ ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳು, ವಿವಿಧ ಸಮಿತಿಗಳ ರಚನೆ, ಸಮಿತಿ ಸದಸ್ಯರ ಜವಾಬ್ದಾರಿಗಳು ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ಅಲ್ಲದೆ ಗಣ್ಯರಿಗೆ ಆಹ್ವಾನ ನೀಡುವುದು, ಸಾರ್ವಜನಿಕರ ಸಹಕಾರ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಿದರು.ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಚನ್ನವೀರ ಕುದರಿ, ಪಂಚಾಕ್ಷರಿ ಮಿಂಚನಾಳ, ಡಾ.ಆರ್.ಆರ್.ನಾಯಿಕ,ಡಾ. ಮೈನುದ್ದೀನ್,
ಸಿದ್ದನಗೌಡ ಜಲಪೂರ, ಸಂಗನಗೌಡ ಪಾಟೀಲ, ಮಂಜುನಾಥ ಕೊಕಟನೂರ, ಈರಣ್ಣ ಕೆರೂಟಗಿ, ಸೋಮು ಹಿರೇಮಠ, ಮಲ್ಲು ಜಮಾದಾರ, ಕಾಶಿನಾಥ್ ತಳಕೇರಿ ಸೇರಿದಂತೆ ಗಣ್ಯರು, ಸೇವಾ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.ವಲಯದ ಮೇಲ್ವಿಚಾರಕ ಶರಣು ಕಾರ್ಯಕ್ರಮದಲ್ಲಿ ಸ್ವಾಗತಿಸಿ, ವಂದಿಸಿದರು.