ಗದಗ

ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಗೆ ಜಪಾನಿನ ಪ್ರಮುಖ ಕಂಪನಿಗಳ 1,300 ಕೋಟಿ ಹೂಡಿಕೆಯ ಮುದ್ರೆ! ‘ಗ್ಯಾರಂಟಿ’ ಜೊತೆಗೆ ಕೈಗಾರಿಕಾ ಕ್ರಾಂತಿ: ಅಶೋಕ ಮಂದಾಲಿ

ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಗೆ ಜಪಾನಿನ ಪ್ರಮುಖ ಕಂಪನಿಗಳ 1,300 ಕೋಟಿ ಹೂಡಿಕೆಯ ಮುದ್ರೆ! ‘ಗ್ಯಾರಂಟಿ’ ಜೊತೆಗೆ ಕೈಗಾರಿಕಾ ಕ್ರಾಂತಿ: ಅಶೋಕ ಮಂದಾಲಿ
A 1,300 crore investment by major Japanese companies serves as a testament to the Congress governmen

ಗದಗ 29 : ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಮ್‌. ಬಿ. ಪಾಟೀಲ್ ಅವರ ಸಫಲ ನಾಯಕತ್ವದಲ್ಲಿ ನವೆಂಬರ್ 2026ರ ಜಪಾನ್ ರೋಡ್‌ಶೋ ಕರ್ನಾಟಕಕ್ಕೆ ಬೃಹತ್ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಬಲ ತುಂಬುವ ‘ಗ್ಯಾರಂಟಿ’ ಜೊತೆಗೆ ಕರ್ನಾಟಕದಲ್ಲಿ ಕೈಗಾರಿಕಾ ಕ್ರಾಂತಿಗೆ ಮುಂದಾಗಿದೆ ಎಂದು ಗದಗ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷಠಾನ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಗದಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1,300 ಕೋಟಿ ಮೊತ್ತದ ಒಟ್ಟು ಹೂಡಿಕೆ ಒಪ್ಪಂದಗಳು ಈ ಪ್ರವಾಸದಲ್ಲಿ ಅಂತಿಮಗೊಂಡು, ರಾಜ್ಯದಲ್ಲಿ 1,400ಕ್ಕೂ ಹೆಚ್ಚು ಉನ್ನತ ಉತ್ಪಾದನಾ ಉದ್ಯೋಗಗಳ ಸೃಷ್ಟಿಗೆ ಬಲವಾದ ಬುನಾದಿ ಹಾಕಿವೆ. ಲಿಯೋ ಎಲೆಕ್ಟ್ರಾನಿಕ್ಸ್‌ ಸಂಸ್ಥೆಯು ನವೆಂಬರ್ 26-27, 2026 ರಂದು ?500 ಕೋಟಿ ಹೂಡಿಕೆಯ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕಾಂಗ್ರೆಸ್ ಸರ್ಕಾರದ ಕೈಗಾರಿಕಾ ನೀತಿಯಲ್ಲಿ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. 

ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಹಂತ 5 ರಲ್ಲಿ ಕೈಗೊಳ್ಳಲಾಗುವ ಕವಾಸಕಿ ಸಂಸ್ಥೆಯ ಈ ಯೋಜನೆಯು 10 ವರ್ಷಗಳ ಅವಧಿಯಲ್ಲಿ 2 ಹಂತಗಳಲ್ಲಿ ವಿಸ್ತರಣೆಯಾಗಲಿದ್ದು, ಹೈಡ್ರಾಲಿಕ್ ಉಪಕರಣ ಕ್ಷೇತ್ರದಲ್ಲಿ ಸುಮಾರು 600 ಉತ್ಪಾದನಾ ಉದ್ಯೋಗಗಳನ್ನು ಒದಗಿಸಲಿದೆ. 

525ಕ್ಕೂ ಹೆಚ್ಚು ಜಪಾನೀಸ್ ಉದ್ಯಮಗಳು ಈಗಾಗಲೇ ಕರ್ನಾಟಕದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಉತ್ತಮ ಕೈಗಾರಿಕಾ ವಾತಾವರಣ ಮತ್ತು ಸುಲಭ ವಹಿವಾಟು ನೀತಿಯನ್ನು ಎತ್ತಿಹಿಡಿದಿವೆ. ಏಪ್ರಿಲ್ 20-22, 2027 ರ ಇನ್ವೆಸ್ಟ್‌ ಕರ್ನಾಟಕ ಜಾಗತಿಕ ಸಮಾವೇಶಕ್ಕೆ ಜಪಾನಿನ ಪ್ರಮುಖ ಉದ್ಯಮ ನಾಯಕರಿಗೆ ಅಧಿಕೃತ ಆಹ್ವಾನ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವು ಮುಂದಿನ ಹಂತದ ಜಾಗತಿಕ ಪಾಲುದಾರಿಕೆಗೆ ಹೆಜ್ಜೆ ಇಟ್ಟಿದೆ. 

ಕಾಂಗ್ರೆಸ್ ಸರ್ಕಾರದ ಕ್ರಾಂತಿಕಾರಿ ನಾಯಕತ್ವವು ಕರ್ನಾಟಕವನ್ನು ಜಾಗತಿಕ ಹೈ-ಟೆಕ್ ಮತ್ತು ನಿಖರ ಉತ್ಪಾದನಾ ರಂಗದಲ್ಲಿ ಅಗ್ರಸ್ಥಾನಕ್ಕೇರಿಸುವಲ್ಲಿ ಸಾಟಿಯಿಲ್‌ಲದ ರಾಜಕೀಯ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದು ಅಶೋಕ ಮಂದಾಲಿ ಅವರು ಹೇಳಿದ್ದಾರೆ. 


ಸುದ್ದಿ ಓದಿ