ಇಂಡಿ

ತಡವಲಗಾದಲ್ಲಿ ಸಂತ ಕನಕದಾಸರ ಜಯಂತಿ ಆಚರಣೆ

ತಡವಲಗಾದಲ್ಲಿ ಸಂತ ಕನಕದಾಸರ ಜಯಂತಿ ಆಚರಣೆ

ಲೋಕದರ್ಶನ ವರದಿ  

             ಇಂಡಿ  27: ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ದಾಸಶ್ರೇಷ್ಠ, ಕೀರ್ತನಕಾರ ಸಂತ ಕನಕದಾಸರ ಜಯಂತಿಯನ್ನು ಇಂದು ಅತ್ಯಂತ ಭಕ್ತಿ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಗ್ರಾಮದ ಹೃದಯ ಭಾಗದಲ್ಲಿರುವ ಸಂತ ಕನಕದಾಸರ ವೃತ್ತದ ಬಳಿ ಸಂತ ಕನಕದಾಸರ ಭಾವಚಿತ್ರಕ್ಕೆ ಮಾಜಿ ಜಿಲ್ಲಾ ಉಪಾಧ್ಯಕ್ಷರಾದ ಬಾಬುಸಾಹುಕಾರ ಮೇತ್ರಿ ಅವರು ಪೂಜೆ ಸಲ್ಲಿಸಿದರು.

               ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಘಟಕ ಅಧ್ಯಕ್ಷರಾದ ಬಿ ಡಿ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿ ಡಿ ಪಾಟೀಲ ಅವರು  ಮಾತನಾಡಿದ ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತರಾಗದೆ, ತಮ್ಮ ಕೀರ್ತನೆಗಳು ಮತ್ತು ಮುಂಡಿಗೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಮಹಾನ್ ದಾರ್ಶನಿಕರು. ’ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಅವರ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ.                                  ಪ್ರತಿಯೊಬ್ಬರೂ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು," ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ , ಚಂಧ್ರಶೇಖರ ರೂಗಿ ಅಶೋಕ ಮಿರ್ಜಿ ಸಂತೋಷ ಹೋಟಗಾರ ನಾಗಪ್ಪ ಮಕಣಿ ಡಾ ಪರಮಾನಂದ ಪೂಜಾರಿ ರಮೇಶ ಹೊಸಮನಿ ಚಂದ್ರಕಾಂತ ಮೇತ್ರಿ ಸಂತೋಷ ಸಾರವಾಡ ರಾಮನಗೌಡ ಪಾಟೀಲ ಧರೇಪ್ಪ ತೇಲಿ ರಾಮಣ್ಣ                            ತಳವಾರ ಸಲಿಮ್ ಬಾಗವಾನ ರಾಜು ಧಡೇದ ಶಿವಶಂಕರ ಹಿಳ್ಳಿ ಎನ್ ಸಿ ಕುಂಬಾರ ರವಿ ಮಸಳಿ ಚನ್ನಪ್ಪ ಮಿರಗಿ ಜೇಟ್ಟೆಪ್ಪ ಸುರಪೂರ ರಾವಣ್ಣ ಎಳಮೇಲಿ ರವಿ ಹೊಸಮನಿ ಶಿವಪ್ಪ ಸುರಪೂರ ಚಂದಪ್ಪ ಮಿರಗಿ ರಾಮಣ್ಣ ಅಂಜುಟಗಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ