ಎಸ್.ಐ.ಆರ್ :ವಿವಿಧ ರಾಜಕೀಯ ಪಕ್ಷಗಳೊಂದಿಗೆ ಡಿಸಿ ಸಭೆ
ಬಾಗಲಕೋಟೆ 08: ವಿಶೇಷ ತೀವ್ರ ಪರಿಷ್ರಣೆ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಡಿಸಿಟೈಸೇಷನ್ ಪೂರ್ಣಗೊಂಡ ನಂತರ ಮತದಾರರಿಗೆ ‘ನೀಡಲಾದ ನೋಟಿಸ್ ವಿಚಾರಣೆ ಕಾರ್ಯದಲ್ಲಿ ಶೇ.96.15 ರಷ್ಟು ಪ್ರಗತಿ ಸಾಧಿಸಲಾಗಿದ್ದು, 1828 ನೋಟಿಸ್ಗಳಿಗೆ ವಿಚಾರಣೆ ಮಾತ್ರ ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡ ರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮತದಾರರ ಪಟ್ಟಿಯ ಪರಿಷ್ಕರಣೆ, ನೋಟಿಸ್ಗಳ ವಿಚಾರಣೆ ಹಾಗೂ ಹಕ್ಕು ಮತ್ತು ಆಕ್ಷೇಪಣೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಕುರಿತು ಸಭೆಯಲ್ಲಿ ಪರೀಶೀಲನೆ ನಡೆಸಿದರು. ಆಗಸ್ಟ್ 17 ರಂದು ಡಿಜಿಟೈಜೇಸನ್ ಪೂರ್ಣಗೊಂಡ ಬಳಿಕ ಅಸಂಗತಿಗಳು ಹಾಗೂ ಮ್ಯಾಪಿಂಗ್ ಆಗದ ಮತದಾರರಿಗೆ ದಿನಾಂಕ ನಿಗದಿಪಡಿಸಿ, ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಒಟ್ಟು 47,430 ಮತದಾರರಿಗೆ ನೋಟಿಸ್ ನೀಡಲಾಗಿತ್ತು.