ಗದಗ

ಹಾನಗಲ್ ಕುಮಾರ ಶಿವಯೋಗಿಗಳ ಸೇವೆ ಅಪೂರ್ವ: ಪಂ. ಶ್ರೀಶೈಲಯ್ಯ ಶಾಸ್ತ್ರಿ

ಹಾನಗಲ್ ಕುಮಾರ ಶಿವಯೋಗಿಗಳ ಸೇವೆ ಅಪೂರ್ವ: ಪಂ. ಶ್ರೀಶೈಲಯ್ಯ ಶಾಸ್ತ್ರಿ

ಲೋಕದರ್ಶನ ವರದಿ  

ಗದಗ, ಅ. 8: ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡಿದ ಹಾನಗಲ್ ಕುಮಾರ ಶಿವಯೋಗಿಗಳು ನಾಡು ಕಂಡ ಅಪರೂಪದ ಶಿವಯೋಗಿಗಳಲ್ಲಿ ಒಬ್ಬರು ಎಂದು ಖ್ಯಾತ ಪ್ರವಚನಕಾರ ಪಂ. ಶ್ರೀಶೈಲಯ್ಯ ಶಾಸ್ತ್ರಿಗಳು ಹೇಳಿದರು.  

ನಗರದ ಮುಳಗುಂದ ನಾಕಾ ಬಳಿಯ ಶ್ರೀ ಅನ್ನಪೂರ್ಣೇಶ್ವರಿ ಮಂದಿರದ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ನಡೆದ 352ನೇ ಮಾಸಿಕ ಶಿವಾನುಭವ ಹಾಗೂ ಲಿಂಗೈಕ್ಯ ಹಾನಗಲ್ ಕುಮಾರ ಶಿವಯೋಗಿಗಳ 159ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ‘ಕಾರಣಿಕ ಯುಗಪುರುಷ ಹಾನಗಲ್ ಶ್ರೀ ಕುಮಾರೇಶ್ವರ ಶಿವಯೋಗಿಗಳು’ ವಿಷಯ ಕುರಿತು ಅವರು ಮಾತನಾಡಿದರು.  

ದೇಶದಲ್ಲೇ ಅಪರೂಪ ಎನ್ನಬಹುದಾದ ಶ್ರೀಯೋಗಮಂದಿರವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದ ಹಾನಗಲ್ ಕುಮಾರ ಶಿವಯೋಗಿಗಳು, ಹರಿದು ಹಂಚಿಹೋಗಿದ್ದ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.  


ಸುದ್ದಿ ಓದಿ