ಕಿನ್ನಾಳ ಪರಂಪರೆ ಕಲೆ ಉಳಿಸಿ, ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ : ಮೀನಾಕ್ಷಿ ಬಣ್ಣದ ಭಾವಿ
ಕೊಪ್ಪಳ 17: ವಿಶ್ವ ವಿಖ್ಯಾತಿ ಪಡೆದ ಕಿನ್ನಾಳಕಲೆ ಪರಂಪರೆ ಮಾದರಿಯಾಗಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು,ಅವರು ಇತ್ತೀಚೆಗೆ ತಾಲೂಕಿನ ಕಿನ್ನಾಳ ಗ್ರಾಮಕ್ಕೆ ಭೇಟಿ ನೀಡಿ ಕಿನ್ನಾಳ ಕಲೆಯ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರನ್ನು ಸಂಪರ್ಕಿಸಿ ಕ್ಲಬ್ ಪರವಾಗಿ ಗೌರವ ಸಮರೆ್ಣ ಮಾಡಿ ಸನ್ಮಾನಿಸಿದ ಬಳಿಕ ಏರಿ್ಡಸಿದ ಸರಳ ಸಾಂಕೇತಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು,ಮುಂದುವರೆದು ಮಾತನಾಡಿವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ತಲೆಮಾರಿನಿಂದ ನಡೆದು ಬಂದಿರುವ ಮತ್ತು ಜಿ.ಐ. ಮಾನ್ಯತೆ ಪಡೆದಿರುವ ಕಿನ್ನಾಳ ಮರದ ಕಲೆ ಇಂದು ದೇಶ-ವಿದೇಶದ ಆರ್ಟ್ ಗ್ಯಾಲರಿಗಳಲ್ಲಿ ಪ್ರಸಿದ್ಧವಾಗಿದೆ. ಈ ಅಪರೂಪದ ಕಲೆಯನ್ನು ಉಳಿಸಿಕೊಂಡು ಬಂದಿರುವ ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು,ಈ ಕಾರ್ಯಕ್ರಮಕ್ಕೆ ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಕೊಮಲಾ ಕುದರಿಮೋತಿ ಅವರು ವಿಶೇಷ ಆಮಂತ್ರಿಕರಾಗಿ ಪಾಲ್ಗೊಂಡು ವಿಶೇಷ ಸಹಕಾರ ನೀಡಿ ಕಲಾವಿದರಿಗೆ ತಟ್ಟೆ, ಬ್ಯಾಗ್ ಮತ್ತು ಶಾಲು ಗಳನ್ನು ವಿತರಿಸಿದರು. ಕಿನ್ನಾಳ ಕಲೆ ಪರಂಪರೆ ಉಳಿಸಿ ಬೆಳೆಸಿಕೊಂಡು ಬಂದಿರುವ ಹಿರಿಯ ಕಲಾವಿದರು ಗಳಿಗೆ ಹಣ್ಣು-ಹೂವು ಮತ್ತು ಹಾರಗಳನ್ನು ವಿತರಿಸಿ ಗೌರವಿಸಿದರೆ, ಪದಾಧಿಕಾರಿಗಳು ಮತ್ತು ಸದಸ್ಯರಾದ ಮಾಲಾ, ಶ್ರೀದೇವಿ, ಸವಿತಾ, ಕವಿತಾ ಸೇರಿದಂತೆ ಇತರರು ಹಣ್ಣು ಮತ್ತು ಸೀರೆಗಳನ್ನು ವಿತರಿಸಿ ಕೃತಜ್ಞತೆ ಸಲ್ಲಿಸಿದರು.ಇದೆ ವೇಳೆಕಲಾವಿದರ ಜೀವನ ಶೈಲಿ, ಕಲೆಯ ತಯಾರಿಕಾ ಪ್ರಕ್ರಿಯೆ ಮತ್ತು ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ಮಾಹಿತಿ ಪಡೆದರು ಕಿನ್ನಾಳ ಕಲಾವಿದರ ಸಮಸ್ಯೆಗಳಿಗೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಸದಾ ಸಹಕಾರ ಮತ್ತು ಪ್ರೋತ್ಸಾಹ ನೀಡಲು ಸಿದ್ಧವಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು,