ಬೆಳಗಾವಿ

ಮಠ ಮಂದಿರಗಳ ಅಭಿವೃದ್ಧಿಗೆ ನಿರಂತರ ಕೆಲಸ : ಬಾಬಾಸಾಹೇಬ ಪಾಟೀಲ

ಮಠ ಮಂದಿರಗಳ ಅಭಿವೃದ್ಧಿಗೆ ನಿರಂತರ ಕೆಲಸ : ಬಾಬಾಸಾಹೇಬ ಪಾಟೀಲ


ನೇಸರಗಿ 17 : ಚನ್ನಮ್ಮನ ಕಿತ್ತೂರು ಮತಕ್ಷೇತ್ರದಲ್ಲಿ ಮಠ ಮಂದಿರ ನಿರ್ಮಾಣಕ್ಕೆ ಅತೀ ಹೆಚ್ಚಿನ ಅನುಧಾನ ತಂದು ಪ್ರತಿಯೊಂದು ಗ್ರಾಮಗಳಲ್ಲಿನ ಮಠ ಮಂದಿರಗಳ  ಅಭಿವೃದ್ಧಿಗೆ ನಿರಂತರ ಕೆಲಸ ಮಾಡಿ ಕೊಟ್ಟ ಮಾತಿನಂತೆ ಜನರ ಕೆಲಸ ಮಾಡುತಿದ್ದೇನೆ ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.   

   ಅವರು ಶನಿವಾರದಂದು ನೇಸರಗಿ - ಮಲ್ಲಾಪುರ ಕೆ.ಎನ್ ಗ್ರಾಮದ  ಗಾಳೇಶ್ವರ ಮಠದಲ್ಲಿ ಶಾಸಕರ ನಿಧಿಯಿಂದ ಬಿಡುಗಡೆಯಾದ 20 ಲಕ್ಷ ಅನುದಾನದಡಿ ನಿರ್ಮಾಣವಾಗಲಿರುವ ಸಭಾ ಮಂಟಪ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಗಾಳೇಶ್ವರ ಮಠವು ಮೊದಲಿನಿಂದಲೂ ಪುಣ್ಯ ಮಹಾನ್ ಪುರುಷರು ಈ ಭಾಗದ ಜನರಿಗೆ ಕಾಯಕಲ್ಪ ನೀಡಿ ಭಕ್ತರ ಬೇಡಿಕೆ ನಿಗಿಸುವ ಮಠವಾಗಿದ್ದು ಮಠದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.      

    ಮಠದ ಪರಮಪೂಜ್ಯ ಚಿದಾನಂದ ಮಹಾಸ್ವಾಮಿಗಳು ಮಾತನಾಡಿ ಮಠದ ಸಭಾ ಮಂಟಪ ನಿರ್ಮಾಣಕ್ಕೆ  20 ಲಕ್ಷ ರೂಪಾಯಿಗಳ ಅನುಧಾನ ಒದಗಿಸಿ ಉತ್ತಮ ಕಾರ್ಯ ಮಾಡಿದ್ದು ಶಾಸಕ ಬಾಬಾಸಾಹೇಬ ಪಾಟೀಲ ಅವರ ಕಾರ್ಯ ಶ್ಲಾಘನೀಯ ಮತ್ತು ಮಠದಲ್ಲಿ ನಡೆಯುವ ಧಾರ್ಮಿಕ ಸಭೆ, ಸಮಾರಂಭಗಳಿಗೆ ಈ ಕಟ್ಟಡ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದರು.

      ಈ ಸಂದರ್ಭದಲ್ಲಿ ಮಲ್ಲಾಪುರದ ಹಿರಿಯರಾದ ಶಿವನಗೌಡ ಯ. ಪಾಟೀಲ, ಆರ್‌. ಬಿ. ಪಾಟೀಲ, ಯುವ ಮುಖಂಡ  ಸಚಿನ್ ಪಾಟೀಲ, ಬಾಳಪ್ಪ ಸೋಮಣ್ಣವರ, ಗ್ರಾಮದ ಗುರುಹಿರಿಯರು, ಗುತ್ತಿಗೆದಾರರಾದ ಆನಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. 


ಸುದ್ದಿ ಓದಿ