ಬೆಳಗಾವಿ

ಜೂಡೋ, ಬಾಕ್ಸಿಂಗ್ನಲ್ಲಿ ಕಾಕತಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ಜೂಡೋ, ಬಾಕ್ಸಿಂಗ್ನಲ್ಲಿ ಕಾಕತಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

ಲೋಕದರ್ಶನ ವರದಿ 

       

ಬೆಳಗಾವಿ 17 : ಶಾಲಾ ಶಿಕ್ಷಣ ಇಲಾಖೆ ವತಿಯಿಂದ  ಇತ್ತೀಚೆಗೆ ನಡೆದ ರಾಜ್ಯಮಟ್ಟದ ಜೂಡೋ ಮತ್ತು ಬಾಕ್ಸಿಂಗ್ ಕ್ರೀಡಾಕೂಟಗಳಲ್ಲಿ ಕಾಕತಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಆರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.ಬಾಗಲಕೋಟೆಯಲ್ಲಿ ನಡೆದ 14 ಮತ್ತು 17 ವರ್ಷದೊಳಗಿನವರ ರಾಜ್ಯಮಟ್ಟದ ಜೂಡೋ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿನಿಯರಾದ ರಂಜನಾ ನಾಯಕ, ಬಿಂದು ಗೊರವ ಹಾಗೂ ಗಾಯತ್ರಿ ಬೆಳಗಾವಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದಲ್ಲಿ ನಡೆದ 14 ಮತ್ತು 17 ವರ್ಷದೊಳಗಿನವರ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭೂಮಿಕಾ ಕುರುಬರ, ಸಮೀಕ್ಷಾ ಸುತಾರ ಹಾಗೂ ಲೋಕೇಶ ಕುರುಬರ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಅರ್ಹತೆ ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತಿ ನೀಡಿದ ಅಂತಾರಾಷ್ಟ್ರೀಯ ಜೂಡೋ ಪಟು ಯಲ್ಲಪ್ಪ ಗೊರವ, ಅರ್ಜುನ ಪ್ರಶಸ್ತಿ ವಿಜೇತ ಬಾಕ್ಸಿಂಗ್ ಪಟು ಮುಕುಂದ ಕಿಲ್ಲೇಕರ್, ಮಲ್ಲು ಕರಗುಪ್ಪಿ, ವಿಶಾಲ್ ನಿಂಬಾಳ್ಕರ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಅಕ್ಕಿ, ಮುಖ್ಯೋಪಾಧ್ಯಾಯ ಅಶೋಕ ಖೋತ ಹಾಗೂ ಶಾಲೆಯ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. 


ಸುದ್ದಿ ಓದಿ