ಶ್ರದ್ಧೆಭಕ್ತಿಯಿಂದ ಸೈಯ್ಯದ್ ಷಾಹ್ ನೂರೂಲ್ಲಾ ಖಾದ್ರಿಯವರ ಗಂಧ ಮತ್ತು ಉರಸು
ಲೋಕದರ್ಶನ ವರದಿ
ಕಂಪ್ಲಿ 10 : ಇಲ್ಲಿನ ಹಜರತ್ ಸೈಯ್ಯದ್ ಷಾಹ್ ನೂರೂಲ್ಲಾ ಖಾದ್ರಿ ಲೋಬಾಲಿ ಇವರ ಗಂಧ ಮತ್ತು ಉರುಸು ಕಾರ್ಯಕ್ರಮಗಳು ಗುರುವಾರ ಮತ್ತು ಶುಕ್ರವಾರ ನಡೆದವು. ಬೆಳಗೋಡ್ ಅಗಸಿಯ ಹಜರತ್ ಸೈಯ್ಯದ್ ಷಾಹ್ ಖಾಜಾ ಮೊಹಿನುದ್ದೀನ್ ಖಾದ್ರಿ ಸಜ್ಜಾದೆ ನಶೀನ್ ಪೀಠಾಧಿಪತಿ ಇವರ ಮನೆಯಿಂದ ಗಂಧದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಹೊಸ ಬಸ್‌ಸ್ಟ್ಯಾಂಡ್ ಬಳಿಯ ಮುದ್ದಾಪುರ ಅಗಸಿಯ ಸುನ್ನಿ ಜಾಮೀಯಾ ಮಸೀದಿ ಹತ್ತಿರದ ದರ್ಗಾಕ್ಕೆ ತಲುಪಿತು.
ಪಟ್ಟಣದ ಸಮಸ್ತ ಭಕ್ತರಿಂದ ಅನ್ನಸಂತರೆ್ಣ ನಡೆಯಿತು. ಉರುಸು ಮತ್ತು ಗಂಧ ಕಾರ್ಯಕ್ರಮಗಳಲ್ಲಿ ಧರ್ಮಗುರುಗಳಾದ ಸೈಯ್ಯದ್ ಷಾಹ್ ಖಾಜಾ ಮೊಹಿನಿದ್ದೀನ್ ಖಾದ್ರಿ ಸಜ್ಜೇದೆ ನಸೀನ್ ಪೀಠಾಧಿಪತಿ ಮತ್ತು ಸೈಯ್ಯದ್ ಷಾಹ್ ಇಕ್ಬಾಲ್ ಖಾದ್ರಿ, ಸೈಯ್ಯದ್ ಷಾಹ್ ನೇಮತುಲ್ಲಾ ಖಾದ್ರಿ, ಸೈಯ್ಯದ್ ಷಾಹ್ ಡಾ.ನೂರ್ ಅಹಮ್ಮದ್ ಖಾದ್ರಿ, ಹುಬ್ಬಳ್ಳಿಯ ಸೈಯ್ಯದ್ ಷಾಹ್ ನಿಸಾರ್ ಅಹ್ಮದ್ ಖಾದ್ರಿ, ಗಂಗಾವತಿಯ ಸೈಯ್ಯದ್ ಷಾಹ್ ತೌಸಿಫ್ ಖಾದ್ರಿ,
ಸೈಯ್ಯದ್ ಇಸ್‌ಹಾಕ್ ಖಾದ್ರಿ, ಸೈಯ್ಯದ್ ಷಾಹ್ ಕರಿಮುಲ್ಲಾ ಖಾದ್ರಿ, ಮುತುವಲ್ಲಿ ದರ್ಗಾ ಹಜರತ್ ಸೈಯ್ಯದ್ ಷಾಹ್ ನೂರೂಲ್ಲಾ ಖಾದ್ರಿ ಮತ್ತು ಪ್ರಮುಖರಾದ ಜೆ.ದಾದಾಸಾಬ್, ಎಂ.ಮೆಹಮೂದ್‌ಸಾಬ್, ಎಂ.ವಾಹೀದ್‌ಸಾಬ್, ಬಾವಿಕಟ್ಟೆ ಬಾಬು, ಶರ್ಮಸ್‌ಸಾಬ್, ವರ್ದಿ ಜಾಫರ್, ಎಸ್.ಆರ್.ರಸೂಲ್‌ಸಾಬ್, ಮಸೀದಿ ಮುತುವಲ್ಲಿ ಮತ್ತು ಇತರರಿದ್ದರು.