ಕಂಪ್ಲಿ

ಪಿ ಎಂ ಸೂರ್ಯ ಘರ್ ಮುಪ್ತ ಬಿಜಿಲಿ ಯೋಜನೆ ನೊಂದಣಿ ಕಾರ್ಯಕ್ರಮ

ಪಿ ಎಂ ಸೂರ್ಯ ಘರ್ ಮುಪ್ತ ಬಿಜಿಲಿ ಯೋಜನೆ ನೊಂದಣಿ ಕಾರ್ಯಕ್ರಮ

ಲೋಕದರ್ಶನ ವರದಿ 


ಕಂಪ್ಲಿ 05 : ಪ್ರತಿಯೊಬ್ಬರು  ಸೋಲಾರ್ ರೂಫ ಟಾಪ್ ಸಿಸ್ಟಮ್ ಅಳವಡಿಸಿ ಕೊಳ್ಳುವ ಮೂಲಕ ಉಚಿತ ವಿದ್ಯುತ್ ಪಡೆಯುವ ಅವಕಾಶವಿದೆ  ಎಂದು ಕಂಪ್ಲಿ ಜೆಸ್ಕಾಂ ಸಹಾಯಕ ನಿರ್ವಾಹಕ ಅಧಿಕಾರಿ ಶ್ರೀನಿವಾಸ ಪ್ರಸಾದ ಹೇಳಿದರು  ಪಟ್ಟಣದ ಜೆಸ್ಕಾ ಕಛೇರಿ ಆವರಣದಲ್ಲಿ ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಪಿ ಎಂ ಸೂರ್ಯಘರ್ ಮುಪ್ತ ಬಿಜಲಿ ಯೋಜನೆ ನೋಂದಣಿ ಕಾರ್ಯಕ್ರಮವನ್ನು ಚಾಲನೆ ನೀಡುವ ಮೂಲಕ ನಂತರ ಮಾತನಾಡಿ  ಸೋಲರ್ ನಿಂದ  ವಿದ್ಯುತ್ ಬಿಲ್ ಕಡಿಮೆ ಮಾಡುವದರಿಂದ ಉಳಿತಾಯ ಕಡಿಮೆ ನಿರ್ವಹಣೆ ವೆಚ್ಚ ಸಬ್ಸಿಡಿಯೊಂದಿಗೆ ಒಂದು ಬಾರಿ ಹೂಡಿಕೆ .ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ. ಜೆಸ್ಕಾಂ ಗೆ ವಿದ್ಯುತ್‌ನ್ನು ಮಾರಾಟ ಮಾಡುವ ಮೂಲಕ ಲಾಭ. ತ್ವರಿತ ಮರುಪಾವತಿ ಅವಧಿ 4ರಿಂದ 6ವರ್ಷಗಳು. 25 ವರ್ಷಗಳ ದೀರ್ಘಬಾಳಿಕೆ ಯಾಗುತ್ತದೆ ಸಾರ್ವಜನಿಕರು ನೋಂದಣಿ ಮಾಡಿಸುವ ಮೂಲಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಿ ಎಂದರು  


ಸುದ್ದಿ ಓದಿ