ಕಡಬಿಯಲ್ಲಿ ಜಾಮೀಯಾ ಮಸೀದಿ, ಕಬರಸ್ತಾನ, ಈದ್ಗಾ ಉದ್ಘಾಟನೆ
ಯರಗಟ್ಟಿ 05: ತಾಲೂಕಿನ ಕಡಬಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ನೂತನ 'ಜಾಮೀಯಾ ಮಸೀದಿ' 'ಕಬರಸ್ಥಾನ' ಹಾಗೂ 'ಈದ್ಗಾ' ಉದ್ಘಾಟಿಸಿದ ಶಾಸಕ ವಿಶ್ವಾಸ ವೈದ್ಯ ಹಾಗೂ ?ಬೆಳಗಾವಿ ಉತ್ತರ ಶಾಸಕರಾದ ಆಸಿಫ್ (ರಾಜು) ಸೇಠಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವಿಶ್ವಾಸ ವೈದ್ಯ ಅವರು ಕಡಬಿ ಗ್ರಾಮದಲ್ಲಿನ ಆರು ಹಾಸಿಗೆಯುಳ್ಳ ಆಸ್ಪತ್ರೆಯನ್ನು 30 ಹಾಸಿಗೆಯುಳ್ಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಶೀಘ್ರ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಭರವಸೆ ನೀಡಿದರು.
ಕಡಬಿಯಲ್ಲಿ 1.5 ಎಕರೆ ಜಾಗದಲ್ಲಿ ನಿರ್ಮಿಸಲಾದ ಈದ್ಗಾ ಮೈದಾನ ಉದ್ಘಾಟಿಸಿ ಮಾತನಾಡಿ, ''ಕಡಬಿಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಇದ್ದು ಪದವಿ ಪೂರ್ವ ವಿದ್ಯಾಲಯ ಮಂಜೂರು ಮಾಡಿಸಿ, ಒಂದೇ ಸೂರಿನಡಿ ಕರ್ನಾಟಕ ಪಬ್ಲಿಕ್ ಶಾಲೆ ಎಂದರು. ಪ್ರಾರಂಭಿಸಲಾಗುವುದು' ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ ಮಾತನಾಡಿ, ''ಸವದತ್ತಿ ಮತಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರು ಅಭಿವೃದ್ಧಿ ಮೂಲಕ ಸರ್ವ ಧರ್ಮದವರ ಮನಸ್ಸನ್ನು ಗೆದ್ದಿದ್ದಾರೆ'', ಎಂದು ಹೇಳಿದರು.
ಹಾಫೀಜ ಅಬ್ದುಲ್ ಮಜೀದ್ ಮೊಹತಮೀಮ, ಗುರು ನಾಥ ಆರೂಢ ಮಠದ ಸದಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮೌಲಾನಾ ಮಹಮ್ಮದ ಕುರಾನ್ ಪಠಣ ಮಾಡಿಸಿದರು, ಮುಗಟಸಾಬ ಮುಗುಟಖಾನ ಅಧ್ಯಕ್ಷತೆ ವಹಿಸಿದ್ದರು, ತಹಸೀಲ್ದಾರ ಮಾಧವಾನಂದ ಗುಂಡಪ್ಪಗೋಳ, ಚಾಯಪ್ಪ ಹುಂಡೇಕರ, ಅಬ್ದುಲಗಪುರ ಗೀವಾಲೆ,ಸಮೀಉಲ್ಲಾ, ಈರ್ಪ ಹವಳಪ್ಪನವರ, ಕಾಶೀಮಸಾಬ ಹೊರಟ್ಟಿ, ಲಕ್ಷ್ಮಣ ಕುಂಟಿರ್ಪಗೋಳ, ಮಲೀಕಸಾಬ ಭಾಗವಾನ, ಅಬ್ದುಲ್ ಲತೀಫ್ ಸವದತ್ತಿ, ಯುನೂಸಹಮ್ಮದ ಜಮಾದಾರ, ಮಾಬುಸಾಬ ನಜೀರ, ಫೀರಸಾಬ ಶೌಕತಲಿ, ಚಾಂದುಸಾಬ ಸನದಿ, ಅಮೀರ ಮುಗುಟಖಾನ, ಮಡಿವಾಳಪ್ಪವನ್ನೂರ ಮುಂತಾದವರಿದ್ದರು. ಸಂಗಮೇಶ ಕನ್ನಿನಾಯ್ಕರ ವಂದಿಸಿದರು.