ಯರಗಟ್ಟಿ

ಬೆನಕಟ್ಟಿ ಗ್ರಾಮದಲ್ಲಿ ಬಿಜೆಪಿಗೆ ಯುವಶಕ್ತಿಯ ಬಲ

ಬೆನಕಟ್ಟಿ ಗ್ರಾಮದಲ್ಲಿ ಬಿಜೆಪಿಗೆ ಯುವಶಕ್ತಿಯ ಬಲ

ಯರಗಟ್ಟಿ 04 : ತಾಲೂಕಿನ ಬೆನಕಟ್ಟಿ ಗ್ರಾಮದ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು, ಭಾರತೀಯ ಜನತಾ ಪಕ್ಷದ ತತ್ವಹಿಸಿದ್ಧಾಂತಗಳು ಹಾಗೂ ಅಭಿವೃದ್ಧಿಪರ ಚಿಂತನೆಗಳನ್ನು ಬೆಂಬಲಿಸಿ ಬಿಜೆಪಿಗೆ ಸೇರೆ​‍್ಡಗೊಂಡರು. 

ಯುವಕರ ಈ ಸೇರೆ​‍್ಡಯಿಂದ ಬೆನಕಟ್ಟಿ ಗ್ರಾಮದಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ದೊರೆತಿದ್ದು, ಯುವಶಕ್ತಿಯ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಸಂಘಟನಾ ಕಾರ್ಯಗಳಿಗೆ ಹೊಸ ಚೈತನ್ಯ ಮೂಡಿದೆ.ಪಕ್ಷದ ತತ್ವಹಿಸಿದ್ಧಾಂತಗಳನ್ನು ಒಪ್ಪಿಕೊಂಡು, ಸಂಘಟನೆ ಹಾಗೂ ಜನಸೇವೆಯ ಪಯಣದಲ್ಲಿ ಕೈಜೋಡಿಸಿರುವ ಎಲ್ಲಾ ಯುವ ಸ್ನೇಹಿತರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ನಿಮ್ಮ ಉತ್ಸಾಹ, ಬದ್ಧತೆ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆ ಪಕ್ಷದ ಸಂಘಟನಾ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರಾದ ಶೇಖರ ಕಾರದಗಿ, ಮಹಾರಾಜಗೌಡ ಪಾಟೀಲ, ಮಲ್ಲಿಕಾರ್ಜುನ ಪುರದಗುಡಿ, ರಾಜು ಜಾಲಿಕೊಪ್ಪ, ಡಾ. ರವಿ ಹನಸಿ, ಸುಭಾಸ ಗಿದಿಗೌಡ್ರ, ರಾಜು ನಿಡವಣಿ, ವೆಂಕಣ್ಣ ಒಂಟಗೋಡಿ, ಹಸನಸಾಬ ದಂಡಿನ, ಬಸವರಾಜ ದೊಡಮನಿ, ನಿಂಗಪ್ಪ ಪ್ರಭುನವರ, ಪರಶುರಾಮ ಘಂಟಿ, ಬಸವರಾಜ ಇಂಚಲ, ಬಸವರಾಜ ಶಿಗ್ಗಾಂವಿ ಹಾಗೂ ಗ್ರಾಮದ ಮುಖಂಡರಾದ ಅಪ್ಪಯ್ಯಪ್ಪ ಶಿರಸಂಗಿ, ಪಂಚಪ್ಪ ಮಾತಾರಿ, ಯಲ್ಲಪ್ಪ ಕುರಿ, ಎ.ಆಯ್‌. ಶಿರಸಂಗಿ, ಮಾಯಪ್ಪ ಚೂರಿ, ಕಾಡಪ್ಪ ವೀರಶೆಟ್ಟಿ, ಮಹಾದೇವ ಜಕಬಾಳ, ರಾಜಶೇಖರ ಗಯ್ಯಾಳಿ, ಪ್ರಕಾಶ ಕಲ್ಲೇದ, ಈರಯ್ಯ ಹಿರೇಮಠ, ತೇಜಪ್ಪ ವಿರಶೆಟ್ಟಿ, ವಿರುಪಾಕ್ಷ ಆಲದಕಟ್ಟಿ, ಈರಣ್ಣ ವಿರಶೆಟ್ಟಿ, ಮುದಕಪ್ಪ ಗುರಗೋಳ, ಸೋಮನಿಂಗ ರೇವಣ್ಣವರ, ಪ್ರವೀಣ ಬಿಷ್ಠನವರ, ಚಂದ್ರು ಬಿಷ್ಠನವರ ಸೇರಿದಂತೆ ಗ್ರಾಮದ ಮುಖಂಡರು, ಕಾರ್ಯಕರ್ತರು ಹಾಗೂ ಯುವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ