ಸ್ವಚ್ಛತಾ ಕಾರ್ಯದ ಮೂಲಕ ಗಾಂಧಿ ಜಯಂತಿ ಆಚರಣೆ
ಯರಗಟ್ಟಿ 03: ಪಟ್ಟಣದ ಬಸವೇಶ್ವರ ಪೌಢಶಾಲೆಯ ಎನ್ಸಿಸಿ ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯ ಕೈಗೊಂಡರು. ಎನ್ಸಿಸಿ ಟ್ರೂಪ್ ಕಮಾಂಡರ್ ಕುಮಾರ ದಾಸರ್ ಮಾತನಾಡಿ, ಗಾಂಧೀಜಿಯವರ ಸ್ವಚ್ಛತೆ ಹಾಗೂ ಸ್ವಚ್ಛ ಸಮಾಜದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ವಿವಿಧೆಡೆ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.
ವಿದ್ಯಾರ್ಥಿಗಳು ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಉಪಠಾಣೆ, ಸಂಗೊಳ್ಳಿ ರಾಯಣ್ಣ ವೃತ್ತ, ಮಹಾತ್ಮ ಗಾಂಧೀಜಿ ವೃತ್ತ ಹಾಗೂ ಸುತ್ತಮುತ್ತಲಿನ ದೇವಸ್ಥಾನಗಳ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಬಿ.ಎಸ್. ಆಲದಕಟ್ಟಿ, ಎನ್.ಎಸ್. ಕಾಂಬಳೆ, ವಿ.ಆರ್. ಅಂತಾಪೂರ, ಡಾ. ರಾಜಶೇಖರ ಯರಗೂರ ಹಾಗೂ ನರ್ಸಿಂಗ್ ಅಧಿಕಾರಿ ಸುನೀಲ್ ಕಾಶಣವರ ಸೇರಿದಂತೆ ಎನ್ಸಿಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.