ಮಾಲಿನಿ ಯಮಧರ್ಮ ಕಲ್ಯಾಣ ಅರ್ಥಾತ್ ಅಶ್ವಮೇದ ಪೌರಾಣಿಕ ನಾಟಕ
ಲೋಕದರ್ಶನ ವರದಿ
ಕಂಪ್ಲಿ 25: ತಾಲೂಕಿನ ಮೇಟ್ರಿ ಗ್ರಾಮದಲ್ಲಿ ಪ್ರಣಮ ಜೋತಿ ರಥೋತ್ಸವ ಹಾಗೂ ಗೌಸಂದ್ರ ಮಾರೆಮ್ಮದೇವಿ ಜಾತ್ರೆಯ ಪ್ರಯುಕ್ತ ಮಹಾದೇವ ತಾತ ರಂಗಮಂದಿರದಲ್ಲಿ ಅಡಿವಿಲಿಂಗ ಮಹಾರಾಜರ ಕೃಪಾ ಪೋಷಿತ ಕರ್ನಾಟಕ ಬಯಲಾಟ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಅಶ್ರಯದಲ್ಲಿ ಮಾಲಿನಿ ಯಮಧರ್ಮ ಕಲ್ಯಾಣ ಅರ್ಥಾತ್ ಅಶ್ವಮೇದ ಯಾಗ ಎಂಬ ಸುಂದರವಾದ ಪೌರಾಣಿಕ ಬಯಲು ನಾಟಕಕ್ಕೆ ಮಂಗಳವಾರ ನಡೆಯಿತು. ಪ್ರದರ್ಶನ: ಬಾಲಕೃಷ್ಣ ಧರ್ಮರಾಯ ನಾರದ ಅರ್ಜುನ ಕೃಷ್ಣ ವೀರವರ್ಮ ಸುಲಬ ಸರಳ ಯಮಧರ್ಮ ಖುಷಧ್ವಜ ಬಬ್ರುವಾಹನ ದ್ರೌಪದಿ ವೇದಾವತಿ ಮಾಲಿನಿ ಇವರು ಪಾತ್ರಧಾರಿಗಳಾಗಿ ನಾಟಕ ಪ್ರದರ್ಶಿಸಿದರು.
ಈಸಂದರ್ಭದಲ್ಲಿ ಮೇಟ್ರಿ ಕುಂಬಾರ ತಿಮ್ಮಪ್ಪ 16ನೇ ವಯಸ್ಸಿನಲ್ಲಿ ರಂಗಭೂಮಿ ಕಲಾವಿದ 31 ನಾಟಕ ಪ್ರದರ್ಶನ ಮಾಡಿದ 31 ನಾಟಕದಲ್ಲಿ ನಾರದ ಪಾತ್ರ ಮಾಡಿದ ಕುಂಬಾರ ತಿಮ್ಮಪ್ಪ ಇವರ ಕಲೆಗೆ ಮೆಚ್ಚಿ ಅಭಿಮಾನಿಗಳು ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು ಮುಖಂಡರಾದ ವೀರಶೈವ ಲಿಂಗಾಯತ ಮಹಾವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಹೊನ್ನಳ್ಳಿ ಹಂಪಾರೆಡ್ಡಿ ಕುಂಬಾರ ರಾಜಪ್ಪ ತಿಮ್ಮಪ್ಪ ಕೆ ಶಿವಮೂರ್ತಿ ವೀರೇಶ ವೆಂಕಟೇಶ ಕುಂಬಾರ ನಾಗರಾಜ ಶಿವರಾಜ ಬಸವರಾಜ ಸೇರಿ ಅನೇಕರಿದ್ದರು.