ದಸರಾ ಕ್ರೀಡಾಕೂಟದ ವಿಭಾಗಕ್ಕೆ ಆಯ್ಕೆಗೊಂಡ ಮೂವರು ವಿದ್ಯಾರ್ಥಿನಿಯರು
ಲೋಕದರ್ಶನ ವರದಿ
ಕಂಪ್ಲಿ 24 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ದಸರಾ ಕ್ರೀಡಾಕೂಟ ಸಿ.ಎಮ್ ಕಪ್-2026 ಹಿನ್ನಲೆ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಂಪ್ಲಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಗಳಿಸುವ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಇಲ್ಲಿನ ಕ್ರೀಡಾಕೂಟದಲ್ಲಿ ವಿದ್ಯಾಸಾಗರ ಇಂಟರ್ ನ್ಯಾಶನಲ್ ಶಾಲೆಯ ವಿದ್ಯಾರ್ಥಿನಿಯರಾದ ಎಸ್.ಪೂಜಾ, ನವ್ಯ, ಸಿಂಧು ಇವರು ಪ್ರಥಮ ಸ್ಥಾನದೊಂದಿಗೆ ವಿಭಾಗ ಮಟ್ಟಕ್ಕೆ ಜಿಗಿದಿದ್ದಾರೆ. ಮಕ್ಕಳ ಸಾಧನೆಗೆ ವಿದ್ಯಾಸಾಗರ ವಸತಿ ಶಾಲೆಯ ಕಾರ್ಯದರ್ಶಿ ಪಿ.ನಾಗೇಶ್ವರರಾವ್, ಪ್ರಾಚಾರ್ಯ ಸಾಯಿ ಕಿಶೋರ್, ಉಪ ಪ್ರಾಚಾರ್ಯೆ ರೋಹಿಣಿ, ಯಕ್ಷ ಯೋಗ ಅಕಾಡೆಮಿಯ ಅಧ್ಯಕ್ಷೆ ಡಾ.ಎಂ.ಶಾಮಲಮ್ಮ ಇವರು ಅಭಿನಂದಿಸುವ ಜೊತೆಗೆ ಮುಂದಿನ ಮಟ್ಟದ ಕ್ರೀಡಾಕೂಟದಲ್ಲಿ ಜಯಶಾಲಿಗಳಾಗಿ ಹೊರ ಹೊಮ್ಮಲಿ ಎಂದು ಶುಭ ಹಾರೈಯಿಸಿದರು.