ಕಂಪ್ಲಿ

ಮಾಬುಸುಭಾನಿ ಗ್ಯಾರಿ​‍್ವ ಹಬ್ಬ ಆಚರಣೆ

ಮಾಬುಸುಭಾನಿ ಗ್ಯಾರಿ​‍್ವ ಹಬ್ಬ ಆಚರಣೆ

ಲೋಕದರ್ಶನ ವರದಿ 

ಕಂಪ್ಲಿ 24 : ಪಟ್ಟಣದ 22ನೇ ವಾರ್ಡಿನ ಎಂ.ಡಿ.ಕ್ಯಾಂಪಿನಲ್ಲಿ ಗೌಸಿಯಾ ಪಾಕ್ ಝಂಡೆಕಟ್ಟೆಯಲ್ಲಿ ಮುಖಂಡ ಕರಡಿ ವಲಿಸಾಬ್ ನೇತೃತ್ವದಲ್ಲಿ ಗ್ಯಾರಿ​‍್ವ ಮಾಬುಸುಭಾನಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಮುಸ್ಲಿಂ ಸಮಾಜದ ಸಂಪ್ರದಾಯದಂತೆ ಗುರುವಾರ ನಡೆಯಿತು.  ನಂತರ ಕರಡಿ ವಲಿಸಾಬ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಗ್ಯಾರಿ​‍್ವ ಹಬ್ಬವನ್ನು ಅಚ್ಟುಕಟ್ಟಾಗಿ ಆಚರಿಸಲಾಯಿತು. ಅಲ್ಲಾನ ಪ್ರಾರ್ಥನೆಯೊಂದಿಗೆ ಬದುಕಿನ ಇಷ್ಟಾರ್ಥಗಳ ಈಡೇರಿಸಿಕೊಳ್ಳುವ ಜೊತೆಗೆ ಜೀವನದಲ್ಲಿ ನೆಮ್ಮದಿಯ ಬದುಕು ಸಾಗಿಸಲು ಸಾಧ್ಯ ಎಂದರು.  ಇಲ್ಲಿನ ಝಂಡೆಕಟ್ಟೆಯಲ್ಲಿ ಝಂಡ ಏರಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಎನ್‌.ರಾಮಾಂಜನೀಯಲು, ಟಿ.ವಿ.ಸುದರ್ಶನರೆಡ್ಡಿ, ಡಾ.ಮಲ್ಲೇಶಪ್ಪ, ಮೆಟ್ರಿ ಜಾಫರ್, ಸಣ್ಣ ಹುಲುಗಪ್ಪ, ಬಾಲಪ್ಪ, ಅಂಜಿನಪ್ಪ, ಯಲ್ಲಪ್ಪ, ಜಿಲಾನ್, ಸೋಮಪ್ಪ, ಲೋಕೇಶ, ಪೀರಸಾಬ್, ಪಾತೀಮಾ, ಮಾಬುನ್ನಿ, ರಾಜಮ್ಮ ಸೇರಿದಂತೆ ಮುಸ್ಲಿಂ ಸಮಾಜದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ