ಕೋಟೆ ಮಹಿಳೆಯರ ಸಮಸ್ಯೆಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು- ಕಾಟಕೊಡುತ್ತಿದ್ದ ಕೋತಿಗಳ ಸೆರೆ
ಲೋಕದರ್ಶನ ವರದಿ
ಕಂಪ್ಲಿ 20: ಪುರಸಭೆ ವ್ಯಾಪ್ತಿಯ ಕೋಟೆ ಪ್ರದೇಶದಲ್ಲಿ ಕಳೆದ ಹಲವು ತಿಂಗಳುಗಳಿಂದ ಕೋತಿಗಳ ಹಾವಳಿ ಅಧಿಕವಾಗಿದ್ದು, ಹಲವಾರು ಮಹಿಳೆಯರಿಗೆ, ಮಕ್ಕಳಿಗೆ ಕಡಿದು ಗಾಯಗೊಳಿಸಿದ್ದು, ಅವುಗಳನ್ನು ಸೆರೆ ಹಿಡಿದು ರಕ್ಷಣೆ ನೀಡಬೇಕೆಂದು ಕೋಟೆ ಪ್ರದೇಶದ ಮಹಿಳೆಯರು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರರ್ಜುನ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.
ಕೋಟೆ ಪ್ರದೇಶದ ಮಹಿಳೆಯರ ಮನವಿಗೆ ಸ್ಪಂದಿಸಿದ ಪುರಸಭೆ ಅಧೀಕಾರಿಗಳು ಮತ್ತು ಸಿಬ್ಬಂದಿಗಳು ಕೋಟೆ ಪ್ರದೇಶದಲ್ಲಿ ಕೋತಿಗಳನ್ನು ಸೆರೆ ಹಿಡಿಯಲು ಬೋನ್ ಅಳವಡಿಸಿ ಇಂದು ಸುಮಾರು 18 ಕೋತಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಅವರು ಕೋಟೆ ಪ್ರದೇಶದಲ್ಲಿ ಕೋತಿಗಳ ಹಾವಳಿ ಅಧಿಕವಾಗಿದ್ದು, ಅವುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಮಹಿಳೆಯರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬೇರಡೆಯಿಂದ ಬೋನನ್ನು ತರಿಸಿ ಕೋತಿಗಳನ್ನು ಹಿಡಿಯಲು ಕ್ರಮಗಳನ್ನು ಕೈಗೊಂಡಿದ್ದು, ಬೋನಿನಲ್ಲಿ ಸುಮಾರು 18 ಕೋತಿಗಳು ಸೆರೆಯಾಗಿದ್ದು, ಅವುಗಳನ್ನು ದೂರದ ಕಾಡಿಗೆ ಬಿಟ್ಟು ಬರಲಾಗುವುದು. ಮತ್ತು ಇನ್ನುಳಿದ ಕೋತಿಗಳನ್ನು ಸಹಿತ ಸೆರೆ ಹಿಡಿದು ಅವುಗಳನ್ನು ಸಹಿತ ದೂರದ ಕಾಡಿಗೆ ಬಿಟ್ಟು ಬರುವುದಾಗಿ ತಿಳಿಸಿದರು.