ಯರಗಟ್ಟಿ

ಕಾಂಗ್ರೆಸ್ ಸೇರೆ​‍್ಡಗೆ ಯುವಕರ ಉತ್ಸಾಹ: ಶಾಸಕ ವಿಶ್ವಾಸ ವೈದ್ಯ

ಕಾಂಗ್ರೆಸ್ ಸೇರೆ​‍್ಡಗೆ ಯುವಕರ ಉತ್ಸಾಹ: ಶಾಸಕ ವಿಶ್ವಾಸ ವೈದ್ಯ

ಲೋಕದರ್ಶನ ವರದಿ 

ಯರಗಟ್ಟಿ 06: ಬೂದಿಗೋಪ್ಪ ಗ್ರಾಮದ ಯುವಕರು ಕಾಂಗ್ರೆಸ ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕೆ ಸೇರೆ​‍್ಡಯಾಗುತ್ತಿರುವುದು ನಿಜಕ್ಕೂ ಸಂತೋಷ ತಂದಿದೆ ಇದರಿಂದ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. ಸಮೀಪದ ಬೂದಿಗೋಪ್ಪ ಕರೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಈಚಗೆ ಹಮ್ಮಿಕೊಂಡಿದ್ದ ಬಿಜೆಪಿ, ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ ಸೇರೆ​‍್ಡ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಮುಂಬರುವ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ ಚುಣಾವಣೆಗಳಿಗೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ದೊರೆಯಲಿದೆ ಎಂದು ಹೇಳಿದರು.   

 ಪ.ಪಂ ಸದಸ್ಯ ನಿಖಿಲ್ ಪಾಟೀಲ ಮಾತನಾಡಿ, ಈ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ ಪಕ್ಷಕ್ಕೆ ಸೇರೆ​‍್ಡಯಾಗುತ್ತಿರುವದು ಸಂಘಟನೆ ಮತ್ತಷ್ಟು ಬಲಿಷ್ಟಗೊಳ್ಳಲಿದೆ ಎಂದರು.  

 ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದ್ದಬಸನ್ನವರ, ಪ.ಪಂ ಸದಸ್ಯ ಸಲಿಂಬೆಗ್ ಜಮಾದಾರ, ಬೆಮುಲ ನಿರ್ದೇಶಕ ಶಂಕರ ಇಟ್ನಾಳ, ಮುಖಂಡ ರಾಘವೇಂದ್ರ ಗಿಡ್ಡಮಲ್ಲಪ್ಪಗೋಳ, ದುಂಡೇಶ ಕೊಡಳ್ಳಿ, ಫಕ್ಕೀರ​‍್ಪ ಆಲದಕಟ್ಟಿ, ರಮೇಶ ಕೊಪ್ಪದ ಗದಿಗೆಪ್ಪ ಇಮ್ಮಡಿ, ಯಲ್ಲಪ್ಪ ಆಲದಕಟ್ಟಿ, ಲಕ್ಷಣ ಸೊಗಲರ, ಕುಮಾರ ಕೊಪ್ಪದ, ಯಲ್ಲಪ್ಪ ದೇಸಾಯಿ, ರಾಮಚಂದ್ರ ಕಾರ್ಲಕಟ್ಟಿ, ಮಂಜು ವಂಟಮೂರಿ, ನಾಯ್ಕಪ್ಪ ಹಿಮ್ಮಡಿ, ಬಸಪ್ಪ ಕೊಪ್ಪದ, ಮಾರುತಿ ಕೊಪ್ಪದ, ವಿಠ್ಠಲ ಸೋಗಲರ, ಕರೆಪ್ಪ ಕೊಪ್ಪದ ಮತ್ತಿತರಿದ್ದರು. 


ಸುದ್ದಿ ಓದಿ