ಛಾಯಗ್ರಾಹಣ ಲೋಕದ ಭೀಷ್ಮ ಲೋಕನಾಥಗೆ ಕಾ. ನಿ. ಪ ದಿಂದ ನುಡಿ ನಮನ
ಬಳ್ಳಾರಿ. ಅ. 06 : ಮುಖ್ಯ ಮಂತ್ರಿಗಳಾದಿಯಾಗಿ ಯಂತಹುದೇ ವ್ಯಕ್ತಿ ಯನ್ನು ಉತ್ತಮ ಪೋಟೋಗಾಗಿ ಸರಿಯಾಗಿ ನಿಲ್ಲುವಂತೆ ಕೂಗಿ ಹೇಳುತ್ತಿದ್ದರು ಅಷ್ಟೇ ಅಲ್ಲ ಅವರು ಪೋಟೋ ಲೈಬ್ರರಿಯಾಗಿದ್ದರು. ಮಾಧ್ಯಮ ಕ್ಷೇತ್ರದವರ ಯಾವುದೇ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಮನೋಭಾವ ನೇರ ನುಡಿಯ ನಿಷ್ಟೂರವಾದಿ ಸ್ವಭಾವವನ್ನು ಲೋಕನಾಥ್ ಹೊಂದಿದ್ದರು ಎಂದು ಸುದ್ದಿ ಮೂಲ ಜಿಲ್ಲಾ ವರದಿಗಾರ ಎಚ್ ಎಂ ಮಹೇಂದ್ರಕುಮಾರ್ ನುಡಿ ನಮನದಲ್ಲಿ ಸ್ಮರಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಮಂಗಳವಾರದಂದು ಇತ್ತೀಚೆಗೆ ನಿಧನರಾದ ಪತ್ರಿಕಾ ಛಾಯಗ್ರಾಹಕ ವೇಣಿ ಲೋಕನಾಥ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಎನ್ ವೀರಭದ್ರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲೋಕನಾಥ ಅವರ ಭಾವಚಿತ್ರಕ್ಕೆ ಪುಷ್ಮ ನಮನ ಸಲ್ಲಿಸಿ, ಒಂದು ನಿಮಿಷದ ಮೌನಚರಣೆ ನಡೆಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯ್ತು.ವಿಶ್ರಾಂತ ವಾರ್ತಾಧಿಕಾರಿ ಚೋರನೂರು ಟಿ.ಕೊಟ್ರ್ಪ, ವಾರ್ತಾ ಸಹಾಯಕ ವಿ.ಸಿ.ಗುರುರಾಜ್, ಹಿರಿಯ ಪತ್ರಕರ್ತರಾದ ಜಿ.ಪ್ರಭಾಕರ್, ಎಂ.ಅಹಿರಾಜ್, ಹನುಮೇಶರಾವ್, ಹೆಚ್.ಬಸವರಾಜ್, ಮೊದಲಾದವರು ಲೋಕನಾಥ ಅವರ ಜೊತೆಗಿನ ಸಂಬಂಧ, ಅವರ ಪೋಟೋಗ್ರಫಿ,
ಸುದ್ದಿಗೆ ಸೂಕ್ತವಾದ ಪೋಟೋ ವನ್ನು ಸಕಾಲಕ್ಕೆ ನೀಡುವಲ್ಲಿ ಅವರ ಕರ್ತವ್ಯ ಪ್ರಜ್ಞೆ, ಅಖಂಡ ಬಳ್ಳಾರಿ ಜಿಲ್ಲೆಯ ಪ್ರನುಖ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದರು ಎಂದು ಅವರ ಸೇವೆಯನ್ನು ಕೊಂಡಾಡಿದರು.ಈ ನುಡಿ ನಮನ ಕಾರ್ಯಕ್ರಮದಲ್ಲಿಮಲ್ಲಿಕಾರ್ಜುನ ಚಿಲಕರಾಗಿ, ತಾಳೂರು ಎರ್ರಿಸ್ವಾಮಿ, ಜಂಭುನಾಥ, ಮಲ್ಲಿಕಾರ್ಜುನ, ಗೋವರ್ಧನರೆಡ್ಡಿ, ಖಲಂದರ್, ಗಿರಿಯಾದವ್, ವಾರ್ತಾ ಇಲಾಖೆಯ ಹನುಂಮತಪ್ಪ ಮೊದಲಾದವರು ಇದ್ದರು.