ವಿಜಯಪುರ

ಕುವೆಂಪು ವಿಚಾರಧಾರೆ ಯುವಕರಿಗೆ ದಾರೀದೀಪ: ಡಾ. ಚೆನ್ನಪ್ಪ ಕಟ್ಟಿ

ಕುವೆಂಪು ವಿಚಾರಧಾರೆ ಯುವಕರಿಗೆ ದಾರೀದೀಪ: ಡಾ. ಚೆನ್ನಪ್ಪ ಕಟ್ಟಿ

ಲೋಕದರ್ಶನ ವರದಿ 


ವಿಜಯಪುರ 06 : ಇಂದಿನ ಜನಾಂಗ ಕುವೆಂಪು ಅವರ ವಿಚಾರ ಧಾರೆಗಳನ್ನು ಕರಗತ ಮಾಡಿಕೊಳ್ಳಬೇಕಾದೆ ಏಕೆಂದರೆ ಯುವಕರು ಇಂದು ಯಾವುದೋ ಒಂದು ಜಾಲದಲ್ಲಿ ಸಿಲುಕಿ ತಮ್ಮ ವಿಚಾರಶೀಲತೆಯನ್ನು ಸಂಕುಚಿತ ಗೊಳಸಿಕೊಳ್ಳುತ್ತಿದ್ದಾರೆ, ಅದರಿಂದ ಹೊರ ಬರಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಕ್ಷ ಡಾ.ಚನ್ನಪ್ಪ ಕಟ್ಟಿ ಹೇಳಿದರು. 

ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎಸ್‌.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು, ಐಕ್ಯೂಎಸಿ, ಕನ್ನಡ ವಿಭಾಗ ಭಾಷಾ ವಿಜ್ಞಾನ ವೇದಿಕೆ ಸಹಯೋಗದಲ್ಲಿ ಅ.06 ರಂದು ಆಯೋಜಿಸಲಾಗಿದ್ದ 'ಕುವೆಂಪು ಓದು:ಕಮ್ಮಟ' ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಹೊಸ ರೀತಿಯ ಆಲೋಚನೆಗೆ ಮುಂದಾಗಬೇಕು ಈ ನಿಟ್ಟಿನಲ್ಲಿ ಕುವೆಂಪು ಒದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ಕುವೆಂಪು ಯುವಕರಿಗೆ ಹೇಳಿದಂತೆ ನಿನಗೆ ನೀನೇ ಗುರು ಬೇರೆ ಯಾರು ಅಲ್ಲ ನಿವು  ಸ್ವಂತ ಆಲೋಚನೆ ಮಾಡಿ ಹೊಸ ಭಾರತ ಕಟ್ಟಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು. ಕುವೆಂಪು ಅವರ ಸಾಹಿತ್ಯವು ಸಾಮಾನ್ಯ ಜನರ ಕೇಂದ್ರೀಕೃತವಾಗಿದೆ , ಮಹಿಳೆಯರ, ನೇಗಿಲಯೋಗಿ ರೈತರನ್ನು ಇವರ ಮೇಲೆ ಇವರ ಸಾಹಿತ್ಯ ರಚನೆಯಾಗಿದೆ.

ಏಕೆಂದರೆ ನಿಜವಾದ ಅನ್ನವನು ಉತ್ಪಾದಿಸುವವರು  ರೈತರು. ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಗೌರವಿಸುವ ಕಾರ್ಯ ಮಾಡಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಶ್ರೀನಿವಾಸ ಎ.ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಸೀಮಿತವಾಗದೆ  ಕುವೆಂಪು ಓದು:ಕಮ್ಮಟ ಇಂತಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರ ವೈಚಾರಿಕತೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು. 


ಸುದ್ದಿ ಓದಿ