ನಮ್ಮ ಸಂಸ್ಕೃತಿ ಉಳಿಯಲು ಗಣೇಶೋತ್ಸವ ಅವಶ್ಯ : ಶಾಸಕ ಯತ್ನಾಳ
ದೇವರಹಿಪ್ಪರಗಿ 06: ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಗಣೇಶೋತ್ಸವದಂತಹ ಆಚರಣೆಗಳು ಮಹತ್ವದ್ದು, ಯುವಜನತೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ಬೆಸೆಯಲು ಗಣೇಶೋತ್ಸವ ಅವಶ್ಯವಾಗಿದೆ ಎಂದು ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು. ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ನಡೆದ 7ನೇ ವರ್ಷದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶೋತ್ಸವದಿಂದ ಯುವಕರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿತು. ಕಾಂಗ್ರೆಸ್ ಸರ್ಕಾರ ಆಚರಣೆಗೆ ನಿಯಮಗಳು ವಿಧಿಸಿದೆ. ಹಿಂದುತ್ವ ಉಳಿಸಲು ನಾವೆಲ್ಲರೂ ಜಾಗೃತ ರಾಗಬೇಕಾಗಿದೆ. ನಮ್ಮ ಧರ್ಮ ಎಲ್ಲರನ್ನು ಅಪ್ಪಿಗೊಳ್ಳುತ್ತದೆ. ಇದಕ್ಕೆ ಉದಾಹರಣೆ ಪೈಲೆಟ್ ಮಚ್ಚಾರ ಹನುಮಾನ್ ಚಾಲೀಸ್ ಪಠಣದಿಂದ ಸುಮಾರು 187 ಜನರ ಪ್ರಾಣ ಕಾಪಾಡಿದ್ದಾನೆ ಇದು ವಿಶ್ವಕ್ಕೆ ಮಾದರಿ. ಸರಕಾರ ರೈತರಿಗೆ ಬರ ಪರಿಹಾರ ಒದಗಿಸದೆ ಭಿಕಾರಿಗಳಂತೆ ಕಾಣುತ್ತಿದ್ದಾರೆ.