ಸಿಂಧಗಿ

ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳ ಬೆಂಬಲ

ಧರಣಿ ಸತ್ಯಾಗ್ರಹಕ್ಕೆ  ವಿವಿಧ ಸಂಘಟನೆಗಳ ಬೆಂಬಲ

ಲೋಕದರ್ಶನ ವರದಿ 


ಸಿಂದಗಿ 06: ನಗರದ ಬಸವೇಶ್ವರ ಸರ್ಕಲ್ ಹತ್ತಿರ, ಗೋಕಾಕ ಚಳವಳಿಯ ರೂವಾರಿ ರೇ.ಜೆ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ 4 ದಿನಗಳೀಂದ ನಡೆದ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ಆದಿಜಾಂಬವ ಜನಸಂಘ, ಭೋವಿ ವಡ್ಡರ ಸಮಾಜ, ತಳವಾರ ಸಮಾಜ ಸೇವಾ ಸಮಿತಿ, ಮಹಿಳಾ ಜಾಗರಣಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು 371 ಜೆ ವಿಜಯಪುರ ಜಿಲ್ಲೆಗೂ ನೀಡುವಂತೆ ಆಗ್ರಹಿಸಿ, ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಕರ್ನಾಟಕ ಆದಿಜಾಂಬವ ಜನಸಂಘದ ಅಧ್ಯಕ್ಷ ಸಾಯಬಣ್ಣ ಗು. ದೇವರಮನಿ ಮಾತನಾಡಿ, ಕಲ್ಯಾಣ ಕರ್ನಾಟಕವು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ 371(ಜೆ) ಕಲಂ ಅನ್ನು ಜಾರಿಗೆ ತರಲಾಗಿದೆ. ಆದರೆ ಈ ಕಲಂನಿಂದ ವಿಜಯಪುರ ಜಿಲ್ಲೆ ಭಾಗದ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಸಿಗಬೇಕಾದ ಮೀಸಲಾತಿ ಸಮರ​‍್ಕವಾಗಿ ಅನುಷ್ಠಾನಗೊಂಡಿಲ್ಲ. ಇದರಿಂದಾಗಿ ಯುವಕರಿಗೆ, ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗುತ್ತಿದೆ ಕಾರಣ ವಿಜಯಪುರ ಜಿಲ್ಲೆಯ ಜನರ ಆಶೋತ್ತರಗಳು ಈಡೇರಬೇಕಾದರೆ 371(ಜೆ) ಕಲಂ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸರ್ಕಾರ ಮಧ್ಯಪ್ರವೇಶಿಸಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಎಂದು ಆಗ್ರಹಿಸಿದರು. 


ಸುದ್ದಿ ಓದಿ