ರೈತಪರ ಹೋರಾಟಗಾರ ಪಂಚಪ್ಪ ಕಲಬುರ್ಗಿ ಮಾತನಾಡಿದರು.
ಸಿಂದಗಿ 04; ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕ ಚಳುವಳಿಯ ರೂವಾರಿ ರೇ ಚ ರೇವಡಿಗಾರ ಪ್ರತಿಷ್ಠಾನ, ಸಿಂದಗಿ 371 ಜೆ ಹೋರಾಟ ಸಮಿತಿ ಇವರ ನೇತೃತ್ವದಲ್ಲಿ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ ಈ ಸಂದರ್ಭದಲ್ಲಿ ಬಾಗವಹಿಸಿದ ರೈತಪರ ಹೋರಾಟಗಾರರಾದ ಪಂಚಪ್ಪ ಕಲಬುರ್ಗಿ, ಕೃಷ್ಣಾ ಕೊಳ್ಳದ ಜಲರಕ್ಷಣ ಹೋರಾಟ ಸಮಿತಿಯ ಎಸ್.ವ್ಹಿ.. ಪಾಟೀಲ, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅರವಿಂದ ಕುಲಕಣೀರ್, ತಾಲೂಕು ಅಧ್ಯಕ್ಷೆ ಜಗದೇವಿ ಬಿರಾದಾರ ಗ್ಯಾರೆಂಟಿ ಯೋಜನಾ ಸಮಿತಿ ಮಾಜಿ ಅದ್ಯಕ್ಷ ಅಶೋಕ ಕೋಳಾರಿ, ಕಸಾಪ ಆಲಮೇಲ ಅಧ್ಯಕ್ಷ ಶಿವು ಗುಂದಗಿ, ರವಿ ಬಡದಾಳ, ಮಾತನಾಡಿ, ಡಾ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ಇಂಡಿ, ಸಿಂದಗಿ, ತಾಳಿಕೋಟಿ, ಮುದ್ದೆಬಿಹಾಳ, ಬಾಗೇವಾಡಿ ಈ ತಾಲೂಕಗಳಲ್ಲಿ ರಜಾಕರ ದಂಗೆ ನಡೆದು ಅನೇಕರು ಮನೆ ಮಠ ಕಳೇದುಕೊಂಡು ತಮ್ಮ ಪ್ರಾಣವನ್ನೆ ಕಳೇದುಕೊಂಡಿದ್ದಾರೆ. ಇದರ ಆದಾರದ ಮೇಲೆ 371 ಜೆ ಯಲ್ಲಿ ಸೇರೆ್ಡಗೊಳ್ಳಬೇಕಾಗಿತ್ತು ಅದರಲ್ಲೂ ಬ್ರೀಟೀಷರ ವರದಿಯಲ್ಲಿ ಕೂಡಾ ಸಿಂದಗಿ ತಾಲೂಕು ಅತೀ ಹಿಂದೂಳೀದ ಪ್ರದೇಶವಾಗಿವೆ ಎನ್ನುವ ವರದಿಯನ್ನು ಪರಿಗಣಿಸಬೇಕಾಗಿತ್ತು ಅದನ್ನು ಮರೆ ಮಾಚಿ ಹೈದ್ರಾಬಾದ ಕರ್ನಾಟಕದ 7 ಜಿಲ್ಲೆಗಳಿಗೆ ಮಾತ್ರ 371 ಜೆ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಕಾರಣ ವರದಿಯಲ್ಲಿರುವ ಅಂಶಗಳನ್ನು ಮರು ಪರೀಶೀಲಿಸಿ ಈ ಬಾಗಕ್ಕೂ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಇಲ್ಲದಿದ್ದರೆ ಪ್ರತೇಕ ರಾಜ್ಯದ ಕೂಗು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉಪವಾಸ ಸತ್ಯಾಗ್ರಹದ ರೂವಾರಿ ಪ್ರತಿಷ್ಠಾನದ ಸಂಚಾಲಕ ರಂಘನಾಥ ತೋರ್ಫೆ ಮಾತನಾಡಿ, ಕಾರಣ ಇತ್ತೀಚಿಗಷ್ಟೇ ಸಂವಿಧಾನದ ಅಧಿನಿಯಮ 371 ಜೆ ಪಡೆದುಕೊಂಡು 25000 ಕೋಟಿ ಅನುದಾನ ದಿಂದ ಪ್ರಗತಿಯ ದಿಶೆಯಲ್ಲಿ ಹೈದರಾಬಾದ್ ಕರ್ನಾಟಕ ಹೆಜ್ಜೆ ಹಾಕಿದೆ. ಏಳು ಬಾರಿ ಕೂಗಿದರೂ ಎಚ್ಚರಗೊಳ್ಳದ ನಾವುಗಳು ಎಂದು ತಮಾಷೆಗೆ ಎಡೆಯಾದವರು. 371 ಜೆ ಇಂದ ವಂಚಿತರಾಗಿ ಇಂದು ಕಡೆಯಾಗಿದ್ದೇವೆ. ಇದಕ್ಕೆ ನಮ್ಮವರ ನಿರ್ಲಕ್ಷ, ಅಂದ್ರೆ ರಾಜಕಾರಣಿಗಳ ಇಚ್ಛಾಶಕ್ತಿ ಬಹು ಮುಖ್ಯ ಕಾರಣಗಳಲ್ಲಿ ಒಂದು ಇಂದಿಗೂ ಬೊಗಸೆ ನೀರಿಗಾಗಿ ನಮ್ಮ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ, ಗುಳೆ ಹೋಗುವುದು ಬದುಕಿಗೆ ಅನಿವಾರ್ಯವಾಗಿದೆ. ನಮ್ಮ ಯುವ ವಿದ್ಯಾರ್ಥಿಗಳು ಎಲ್ಲ ರೀತಿಯಿಂದ ಅರ್ಹತೆ ಇದ್ದರೂ ಸರ್ಕಾರಿ ನೌಕರಿಗೆ ಹಗಲುಗನಸು ಕಾಣುವಂತಾಗಿದೆ. ಓದ್ಯೋಗೀಕರಣವಂತೂ ದೂರದ ಮಾತಾಗಿದೆ. ಸಾಕಷ್ಟು ನೀರಿದ್ದರೂ ಕೈಗೆಟಕದ ನಮಗೆ, ಮತ್ತೊಮ್ಮೆ ಕರ್ನಾಟಕ ಉಳಿಸುವ ಕನ್ನಡ ಚಳುವಳಿ ನಡೆಸುವ ಅನಿವಾರ್ಯತೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ ತಹಶೀಲ್ದಾರ ಕರೇಪ್ಪ ಬೆಳ್ಳಿ, ನ್ಯಾಯವಾದಿಗಳಾದ ಶಂಬುಲಿಂಗ ಕಕ್ಕಳಮೇಲಿ, ದಾನಪ್ಪಗೌಡ ಚನ್ನಗೊಂಡ, ಯುವಬ್ರೀಗೆಡನ ರಾಜು ಬಿರಾದಾರ, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ, ಕೃಷ್ನಾ ಕೊಳ್ಳದ ಹೋರಾಟ ಸಮಿತಿಯ ಗುರು ಪಡಶೆಟ್ಟಿ, ದಲಿತ ಸಂಘಟನೆಯ ಸಾಯಬಣ್ಣಾ ದೇವರಮನಿ, ಕೆಆರ್‌ಎಸ್ ಪಕ್ಷದ ತಾಲೂಕು ಅದ್ಯಕ್ಷ ಸಂಗಣ್ಣ ಬ್ಯಾಕೋಡ, ಮಹಿಳಾ ಜಾಗರಣಾ ಸಮಿತಿ ಸಂಚಾಲಕಿ ಶೈಲಜಾ ಸ್ಥಾವರಮಠ, ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಅನಸೂಯಾ ಪರಗೊಂಡ, ಶಾಮಲಾ ಮಂದೇವಾಲಿ ಸೇರಿದಂತೆ ಅನೇಕರು ಮಾತನಾಡಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ವ್ಹಿ.ಬಿ.ಕುರಡಿ, ಜಿಪಂ ಮಾಜಿ ಅದ್ಯಕ್ಷ ಸಿದ್ದರಾಮ ಪಾಟೀಲ, ಆನಂದ ಶಾಬಾದಿ, ಪಂಡಿತ ಯಂಪೂರೆ, ಸಿದ್ದು ಕಡಗಂಚಿ, ಮಲ್ಲಿಕಾರ್ಜುನ ಅಲ್ಲಾಪುರ ಸೇರಿದಂತೆ ನಾಗರಿಕರು ಇದ್ದರು.