371ಜೆ ಸೌಲಭ್ಯ: ವಿಜಯಪುರ ಜಿಲ್ಲೆ ಸೇರೆ್ಡಗೆ ಆಗ್ರಹ
ಲೋಕದರ್ಶನ ವರದಿ
ಸಿಂದಗಿ 06 : ಕೆಲವು ವರ್ಷಗಳ ಹಿಂದೆ ಹೈದ್ರಾಬಾದ ಕರ್ನಾಟಕಕ್ಕೆ 371ಜೆ ನೀಡುವಂತೆ ಹೋರಾಟ ನಡೆಸಿದ ಪ್ರತಿಫಲವಾಗಿ ಅವರಿಗೆ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಅದರಲ್ಲಿ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿರುವುದು ದುರಂತವೇ ಸರಿ. ಈ ಬಾಗಕ್ಕೂ ಸೌಲಭ್ಯ ದೊರೆಯಬೇಕು ಎನ್ನುವ ಕೂಗು ಪ್ರಾರಂಭಿಸಿದ್ದಿರಿ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟು ಧರಣಿ ಸತ್ಯಾಗ್ರಹ ನಡೆಸಿ ಈ ಬೇಡಿಕೆಯನ್ನು ಕೇಂದ್ರದಿಂದ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನಿಸುವೆ ಎಂದು ಸಂಸದ ರಮೇಶ ಜೀಗಜೀಣಗಿ ಹೇಳೀದರು.
ನಗರದ ಬಸವೇಶ್ವರ ವೃತ್ತದಲ್ಲಿ ಗೋಕಾಕ ಚಳುವಳಿಯ ರೂವಾರಿ ರೇ ಚ ರೇವಡಿಗಾರ ಪ್ರತಿಷ್ಠಾನ, ಸಿಂದಗಿ 371 ಜೆ ಹೋರಾಟ ಸಮಿತಿ ಇವರ ನೇತೃತ್ವದಲ್ಲಿ 3 ದಿನಗಳಿಂದ ಹಮ್ಮಿಕೊಂಡ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿ, ಎಲ್ಲ ಕಡತಗಳನ್ನು ತಯಾರಿಸಿ ಈ ಬಾಗದ ಎಲ್ಲ ಶಾಸಕರು, ಸಚಿವರ ಮೂಲಕ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾದರೆ ಸಂಸತ್‌ನಲ್ಲಿ ಚರ್ಚೆ ಮಾಡಿ 371ಜೆ ಯಲ್ಲಿ ಈ ಜಿಲ್ಲೆಯನ್ನು ಸೇರೆ್ಡ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯಂಕಂಚಿ ಕುಂಟೋಜಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು. ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮಂಡಲ ಅದ್ಯಕ್ಷ ಸಂತೋಷ ಪಾಟೀಲ ಡಂಬಳ, ಶಾಂತಿ ನಿಕೇತನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸುರೇಶಗೌಡ ಬಿರಾದಾರ, ನ್ಯಾಯವಾದಿ ದಾನಪ್ಪಗೌಡ ಚನ್ನಗೊಂಡ, ರೈತಸಂಘದ ಮುಖಂಡ ಸಿದ್ರಾಮ ರಂಜುಣಗಿ, ರವಿಗೌಡ ಪೀರಶೆಟ್ಟಿ, ಕೃಷ್ಣಾ ಕೊಳ್ಳದ ಹೋರಾಟ ಸಮಿತಿಯ ಗುರು ಪಡಶೆಟ್ಟಿ, ಈರಣ್ಣಗೌಡ ಬಿರಾದಾರ, ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಶಿವಾನಂದ ಕಲಬುರ್ಗಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅದ್ಯಕ್ಷ ಸಿದ್ದರಾಮ ಪಾಟೀಲ, ಅಶೋಕ ವಾರದ, ಸಾಯಬಣ್ಣಾ ದೇವರಮನಿ, ಕೆಆರ್‌ಎಸ್ ಪಕ್ಷದ ತಾಲೂಕು ಅದ್ಯಕ್ಷ ಸಂಗಣ್ಣ ಬ್ಯಾಕೋಡ, ಮಹಿಳಾ ಜಾಗರಣಾ ಸಮಿತಿ ಸಂಚಾಲಕಿ ಶೈಲಜಾ ಸ್ಥಾವರಮಠ, ಶಾಮಲಾ ಮಂದೇವಾಲಿ, ಆನಂದ ಶಾಬಾದಿ, ಪಂಡಿತ ಯಂಪೂರೆ, ಸಿದ್ದು ಕಡಗಂಚಿ, ಸೇರಿದಂತೆ ನಾಗರಿಕರು ಇದ್ದರು.