ಜಮಖಂಡಿ

ಕೆರೆಗೆ ಬಿದ್ದು ಮಹಿಳೆ ಸಾವು: ಸಾವಿನ ಕಾರಣ ನಿಗೂಢ

ಕೆರೆಗೆ ಬಿದ್ದು ಮಹಿಳೆ ಸಾವು: ಸಾವಿನ ಕಾರಣ ನಿಗೂಢ

ಲೋಕದರ್ಶನ ವರದಿ 

ಜಮಖಂಡಿ  06 : ತಾಲ್ಲೂಕಿನ ಹುನ್ನೂರ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿರುವ ಹೂವಿನ ಸಿದ್ದ ಸರೋವರ ಕೆರೆಯಲ್ಲಿ ಮಹಿಳೆಯೊಬ್ಬರು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. 

ಮೃತ ಮಹಿಳೆಯನ್ನು ಆಸಂಗಿ ಗ್ರಾಮದ ದೀಪಾ ಮಲ್ಲಿಕಾರ್ಜುನ ಅಂಬಿ (27) ಎಂದು ಗುರುತಿಸಲಾಗಿದೆ. ಅವರು ಸಿದ್ದಾಪುರ ಗ್ರಾಮದ ತಮ್ಮ ಗಂಡನ ಮನೆಯಲ್ಲಿ ವಾಸವಾಗಿದ್ದರು. ಅವರ ಸಂಬಧಿಕರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದು. ಅವರ ಆರೈಕೆಯನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲಿ ಇದ್ದು. ಯಾವ ಸಮಯದಲ್ಲಿ ಆಸ್ಪತ್ರೆಯಿಂದ ಹೊರಗೆ ಹೋಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿರುವುದಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.  

ಮಹಿಳೆ ಕೆರೆಗೆ ಬಿದ್ದು ಮೃತಪಟ್ಟಿರುವುದು ತಿಳಿದುಬಂದಿದ್ದು, ಸಾವಿಗೆ ನಿಖರವಾದ ಕಾರಣ ಹಾಗೂ ಅವರು ಯಾವ ಪರಿಸ್ಥಿತಿಯಲ್ಲಿ ಕೆರೆಗೆ ಬಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆರೆಯ ದಂಡೆಯ ಮೆಟ್ಟಿಲುಗಳ ಬಳಿ ಮಹಿಳೆ ಧರಿಸಿದ್ದ ಚಪ್ಪಲಿಗಳು ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ. ಮಹಿಳೆಯ ಸಾವಿನ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ. 


ಸುದ್ದಿ ಓದಿ