ಜಮಖಂಡಿ

ಪಾಳು ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ; ಸ್ಥಳೀಯರ ಆತಂಕ

ಪಾಳು ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ; ಸ್ಥಳೀಯರ ಆತಂಕ


ಜಮಖಂಡಿ 06 : ನಗರದ ಒಳಚರಂಡಿ ನಿರ್ಮೂಲನಾ ಕೇಂದ್ರದ ಆವರಣದಲ್ಲಿರುವ ಹಲವು ವರ್ಷಗಳಿಂದ ಬಳಕೆಯಾಗದೆ ಪಾಳು ಬಿದ್ದ ವಸತಿ ಗೃಹವೊಂದರಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 

ಮೃತರನ್ನು ನಗರದ ಮುಧೋಳ ಗಲ್ಲಿಯ ನಿವಾಸಿ ಮಹಾಂತೇಶ ಪಾಟೀಲ (33) ಎಂದು ಗುರುತಿಸಲಾಗಿದೆ. 

ಸ್ಥಳಕ್ಕೆ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಅನೀಲ ಕುಂಬಾರ ಅವರ ನೇತೃತ್ವದಲ್ಲಿ ಪೋಲಿಸ ಪದೇಗಳಾದ ಶಂಕರ ಆಸಂಗಿ, ಪ್ರಕಾಶ ಹೊಸಮನಿ, ಈರಣ್ಣ ದಾಶ್ಯಾಳ, ಲೋಕೆಶ ಯಲಶೆಟ್ಟಿ, ಶಂಕರ ಮೂಲಿಮನಿ ಹಾಗೂ ಬಿ.ಎ. ಮೇಳಿ ಭೇಟಿ ನೀಡಿ ತನಿಖೆಯನ್ನು ನಡೆಸಿದ್ದು. ವ್ಯಕ್ತಿಯ ಆತ್ಮಹತ್ಯೆಯ ಕುರಿತು ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪಾಲು ಬಿದ್ದ ಕಟ್ಟಡಗಳಿಂದ ಸಾರ್ವಜನಿಕರಿಗೆ ಆತಂಕ : 

ಒಳಚರಂಡಿ ನಿರ್ಮೂಲನಾ ಕೇಂದ್ರದ ಆವರಣದಲ್ಲಿರುವ ವಸತಿ ಗೃಹಗಳು ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಪಾಳು ಬಿದ್ದಿವೆ. ಸೂಕ್ತ ನಿರ್ವಹಣೆ ಹಾಗೂ ಭದ್ರತಾ ವ್ಯವಸ್ಥೆಗಳ ಕೊರತೆಯಿಂದ ಈ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ಮತ್ತು ದುಷ್ಚಟಗಳಿಗೆ ಅವಕಾಶವಾಗುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿವೆ. 

ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳವನ್ನು ಸ್ವಚ್ಛಗೊಳಿಸುವುದು, ಪಾಳು ಬಿದ್ದ ಕಟ್ಟಡಗಳ ಸ್ಥಿತಿಗತಿ ಪರೀಶೀಲಿಸುವುದು ಹಾಗೂ ಅಪಾಯಕಾರಿ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 


ಸುದ್ದಿ ಓದಿ