ರಾಮಾನಂದ ತೀರ್ಥ ಜಯಂತಿ ಆಚರಣೆ
ವಿಜಯಪುರ 5: ನಗರದ ಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿಯಿಂದ ಹೈದರಾಬಾದ್ ವಿಮೋಚನಾ ಚಳವಳಿ ನೇತೃತ್ವ ವಹಿಸಿ, ಭಾರತದ ಸ್ವಾತಂತ್ರ್ಯ ಚಳವಳಿಗೆ ಅಮೋಘ ಕೊಡುಗೆ ನೀಡಿದ ಸ್ವಾಮಿ ರಾಮಾನಂದ ತೀರ್ಥ ಅವರ 123ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾ 371(ಜೆ) ಹೋರಾಟಗಾರ ವಿನೋದ ಖೇಡಗಿ, ಭಾರತದ ಸ್ವಾತಂತ್ರ್ಯ ಹಾಗೂ ಹೈದರಾಬಾದ್ ವಿಮೋಚನಾ ಚಳವಳಿಯ ಇತಿಹಾಸದಲ್ಲಿ ಸ್ವಾಮಿ ರಾಮಾನಂದ ತೀರ್ಥ ಅವರ ಪಾತ್ರ ಮಹತ್ವದ್ದಾಗಿದೆ.
ವಿಮೋಚನಾ ಚಳವಳಿಯ ನೇತೃತ್ವ ವಹಿಸಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ಪ್ರತಿಯೊಬ್ಬ ದೇಶವಾಸಿಯ ಕರ್ತವ್ಯ ಎಂದರು.
ಸ್ವಾಮಿ ರಾಮಾನಂದ ತೀರ್ಥ ಅವರ ಜನ್ಮದಿನವನ್ನು ಪ್ರತಿವರ್ಷ ಸರ್ಕಾರಿ ಜಯಂತಿಯಾಗಿ ಆಚರಿಸಿ ಗೌರವ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಈ ವರ್ಷವೂ ಜಯಂತಿ ಆಚರಿಸದಿರುವುದು ರಾಜ್ಯದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಮುಂದಿನ ವರ್ಷದಿಂದ ರಾಜ್ಯಾದ್ಯಂತ ಸರ್ಕಾರದ ವತಿಯಿಂದ ಜಯಂತಿ ಆಚರಿಸಿ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಅನಿಲ್ ಇಕ್ಕಡ, ಎನ್. ಸುರೇಶಕುಮಾರ, ವಸಂತ ಭೈರಾಮಡಿ ಜಗದೇವ, ಸೂರ್ಯವಂಶಿ, ಮಲ್ಲಿಕಾರ್ಜುನ ಬಟಗಿ ಸೇರಿದಂತೆ ಮಲ್ಲನಗೌಡ ಪಾಟೀಲ (ಬರಟಗಿ), ಸಂಜೀವಗೌಡ ಪಾಟೀಲ (ಕನ್ನೂರ), ಕಲ್ಲಪ್ಪ ಶಿವಶರಣ, ಅಶೋಕ ವಾಲಿಕಾರ, ಸಾಗರ ಸಾವಳಗಿ, ಅಂಬಣ್ಣ ಗುನ್ನಾಪುರ, ಅನಿಲ್ ಪವಾರ, ಮಲ್ಲಿಕಾರ್ಜುನ ಲಂಗೋಟಿ, ಸಂತೋಷ ಕಲಗುಡಿ, ರಾಜು ತಡಲಗಿ, ರಾಜು ಕುಮಟಗಿ, ಗುರು ಹಿರೇಮಠ, ಅರುಣ ವಾಗ್ದಂಡೆ, ರಮೇಶ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.