ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವ ಬದ್ಲಾಪುರ ಸಿಹಿ ಗೆಣಸು
ಸಂಬರಗಿ 05 : ಪ್ರತಿಯೊಬ್ಬರಿಗೂ ಪರಿಶ್ರಮವಿದ್ದರೆ ಯಶಸ್ಸಿನ ಶಿಖರ ತಲುಪಬಹುದು ಎಂಬುದಕ್ಕೆ ಜಂಬಗಿ ಗ್ರಾಮದ ಬಾಪು ಪಾಟೀಲ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ಪಡೆಯುವ ಮೂಲಕ ಅವರು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಕೃಷ್ಣಾ ಸಹಕಾರಿ ಬ್ಯಾಂಕ್ನಲ್ಲಿ ಹಲವು ವರ್ಷಗಳ ಕಾಲ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಬಾಪು ಪಾಟೀಲ, ನಿವೃತ್ತಿಯ ಬಳಿಕ ಪ್ರಗತಿಪರ ರೈತರಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಮಾಡುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿದ್ದಾರೆ.
ಬದ್ಲಾಪುರ ಸಿಹಿ ಗಣಸು ಸುಮಾರು 100 ದಿನಗಳ ಶೆಲ್ಫ್ಲೈಫ್ ಹೊಂದಿದ್ದು, ಎಕರೆಗೆ 7ರಿಂದ 8 ಟನ್ವರೆಗೆ ಉತ್ಪಾದನೆ ದೊರೆಯುತ್ತದೆ. ಒಂದು ಗಣಸಿನ ತೂಕ 500ರಿಂದ 800 ಗ್ರಾಂವರೆಗೆ ಇರುತ್ತದೆ. ಬೀಜಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪಲೂಸ್ನಿಂದ ತರಲಾಗುತ್ತದೆ. ಅವುಗಳನ್ನು ಬಳ್ಳಿಗಳ ರೂಪದಲ್ಲಿ ನೆಟ್ಟು ಹನಿ ನೀರಾವರಿ ಮೂಲಕ ನೀರುಣಿಸಲಾಗುತ್ತದೆ.
ಬೆಳೆ ಸಂಪೂರ್ಣವಾಗಿ ಬೆಳೆದು ಸಿದ್ಧವಾಗುವವರೆಗೆ ಎರಡು ಬಾರಿ ಕೀಟನಾಶಕ ಸಿಂಪಡಿಸಲಾಗುತ್ತದೆ. ಓಷಧ ಸಿಂಪಡಿಸಿದ ಬಳಿಕ ಬಳ್ಳಿಗಳು ಹರಡಿ, ಸಸಿಗಳ ಬೆಳವಣಿಗೆ ಉತ್ತಮವಾಗುತ್ತದೆ. ಗಣಸು ನೆಡುವ ಮೊದಲು ಭೂಮಿಯನ್ನು ಉಳುಮೆ ಮಾಡಿ ಮೂರು ಅಡಿ ಅಂತರದಲ್ಲಿ ಸಾಲುಗಳನ್ನು ಮಾಡಲಾಗುತ್ತದೆ. ನಾಟಿ ಮಾಡಿದ ಸುಮಾರು ಎಂಟು ದಿನಗಳಲ್ಲಿ ಮೊಳಕೆ ಬರುತ್ತದೆ.