ಲಯನ್ಸ್ ಕ್ಲಬ್‌ದಿಂದ ಉತ್ತಮ ಶಿಕ್ಷಕ ಮತ್ತು ಎಂಜೀನೀಯರ್ ಪ್ರಶಸ್ತಿ ಪ್ರಧಾನ
ಲೋಕದರ್ಶನ ವರದಿ
ಮೂಡಲಗಿ 05 : ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದದಿಂದ ಶಿಕ್ಷಕರ ದಿನಾಚರಣೆ ಹಾಗೂ ಎಂಜೀನೀಯರ್ ದಿನಾಚರಣೆಯನ್ನು ಸ್ಥಳೀಯ ಸಾರದಾ ಸಾಂಸ್ಕೃತಿ ಭವನದಲ್ಲಿ ಆಚರಿಸಿದರು.
2026ಹಿ27ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಮಸಗುಪ್ಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕರ ಗಾಡವಿ ಹಾಗೂ ಚೈತನ್ಯ ಶಾಲೆಯ ಮಹಾಂತೇಶ ತ್ಯಾಪಿ ಅವರಿಗೆ ಹಾಗೂ ಉತ್ತಮ ಎಂಜೀನೀಯರ್ ಪ್ರಶಸ್ತಿಯನ್ನು ಮಲ್ಲಿಕಾರ್ಜುನ ತೇಲಿ ಹಾಗೂ ನೇಹಾಲ ಬಂದಿ ಅವರಿಗೆ ಪ್ರದಾನ ಮಾಡಿದರು.
ಶಿಕ್ಷಕರ ಪರವಾಗಿ ಶಂಕರ ಗಾಡವಿ ಹಾಗೂ ಮಹಾಂತೇಶ ತ್ಯಾಪಿ ಅವರು ಮಾತನಾಡಿ ‘ಶಿಕ್ಷಕ ವೃತ್ತಿ ಪವಿತ್ರವಾಗಿದ್ದು, ದೇಶದ ಭವಿಷ್ಯ ನಿರ್ಮಿಸುವಂತ ಗುರುತರವಾದ ಜವಾಬ್ದಾರಿಯು ಶಿಕ್ಷಕರ ಮೇಲಿದೆ. ಪ್ರಶಸ್ತಿ ಪಡೆಯುವುದರಿಂದ ನಮ್ಮ ಜವಾಬ್ದಾರಿಗಳು ಹೆಚ್ಚಾಗಿವೆ’ ಎಂದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ ದೇಸಾಯಿ, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಬಾಲಶೇಖರ ಬಂದಿ, ಜಿಲ್ಲಾ ಜಂಟಿ ಖಜಾಂಚಿ ವೆಂಕಟೇಶ ಸೋನವಾಲಕರ, ಕಾಯದರ್ಶಿ ಕೃಷ್ಣಾ ಕೆಂಪಸತ್ತಿ, ಖಜಾಂಚಿ ಡಾ. ಯಲ್ಲಾಲಿಂಗ ಮುಳವಾಡ, ಸಂಜಯ ಮೋಕಾಶಿ, ಶ್ರೀಶೈಲ್ ಲೋಕನ್ನವರ, ಶಿವಾನಂದ ಗಾಡವಿ, ಶಿವಬೋಧ ಯರಝರ್ವಿ, ಗೀರೀಶ ಆಸಂಗಿ, ವೆಂಕಟೇಶ ಪಾಟೀಲ ಮತ್ತಿತರರು ಭಾಗವಹಿಸಿದ್ದರು. ಈರಣ್ಣ ಕೊಣ್ಣೂರ ಕಾರ್ಯಕ್ರಮ ನಿರೂಪಿಸಿದರು.