ಬೆಳಗಾವಿ

ಸೇನೆಯಲ್ಲಿ 17 ವರ್ಷಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧನಿಗೆ ಸನ್ಮಾನ

ಸೇನೆಯಲ್ಲಿ 17 ವರ್ಷಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧನಿಗೆ ಸನ್ಮಾನ

ಲೋಕದರ್ಶನ ವರದಿ 


ಗುರ್ಲಾಪೂರ 04 : ಭಾರತೀಯ ಸೇನೆಯಲ್ಲಿ ಸತತ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗ್ರಾಮದ ಯೋಧ ಮಹಾಂತೇಶ ಮಠಪತಿ ಅವರಿಗೆ ಮಹಾಲಿಂಗಪುರ ನಗರದ ಸುಕುನ ಹೋಟೆಲ್ಸ್‌ ಭವನದಲ್ಲಿ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ನಡೆಯಿತು.  

ದೇಶ ಸೇವೆಯಲ್ಲಿ ಸಲ್ಲಿಸಿದ ಅವರ ಅಮೂಲ್ಯ ಸೇವೆಯನ್ನು ಸ್ಮರಿಸಿದ ಅಭಿಮಾನಿಗಳು ಹಾಗೂ ಶಿವಾಪುರ ಗ್ರಾಮದ ಗೆಳೆಯರ ಬಳಗದ ವತಿಯಿಂದ ಯೋಧ ಮಹಾಂತೇಶ ಮಠಪತಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  

ಈ ಸಂದರ್ಭದಲ್ಲಿ ಅವರ ಸೇನಾ ಸೇವೆಯನ್ನು ಶ್ಲಾಘಿಸಿದ ಗಣ್ಯರು, ನಿವೃತ್ತ ಜೀವನ ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.  

ಸಮಾರಂಭದಲ್ಲಿ ಗ್ರಾಮದ ನಾಗಪ್ಪ ಚಿನ್ನಪ್ಪ ಗೋಳ, ಶಿವಪ್ಪ ಬಿ. ಪಾಟೀಲ, ರಾಜು ಅಂಗಡಿ, ಮಲ್ಲಿಕುಲಗುಡ, ರೇವಪ್ಪ ಬಿಳ್ಳೂರ, ಗವಿಶ್ರೀ ರೇವಮಠ, ಬಸವರಾಜ ರೊಡ್ಡನವರ್, ಮಲ್ಲು ಉಳ್ಳಾಗಡ್ಡಿ, ಶ್ರೀಕಾಂತ ಸೊನಧೋಳಿ, ಪ್ರಕಾಶ ಬಿಳ್ಳೂರ, ಪತ್ರಕರ್ತ ಅರ್ಜುನ ಬಿ. ಪಾಟೀಲ, ದುಂಡಪ್ಪ ಬಿ. ಪಾಟೀಲ, ಹಣಮಂತ ಹಡಗಿನಾಳ ಸೇರಿದಂತೆ ಮಾಜಿ ಯೋಧರ ಸ್ನೇಹಿತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ