ಪದವೀಧರ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ
ದೇವರಹಿಪ್ಪರಗಿ 04: ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ(6-8) 2026-31 ನೇ ಸಾಲಿನ ಅವಧಿಗೆನೂತನ ಅಧ್ಯಕ್ಷರಾಗಿ ಭೈರವಾಡಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿನೋದ ಬಣಜಿಗೇರ,ಪ್ರಧಾನ ಕಾರ್ಯದರ್ಶಿಯಾಗಿ ಮುಳಸಾವಳಗಿ ಶಾಲೆಯ ಮಂಜುನಾಥ ಜಾಧವ ಹಾಗೂ ಖಜಾಂಚಿಯಾಗಿ ಯಾಳವಾರ ಶಾಲೆಯ ಮಳಿಯಪ್ಪ ಅಂತರಗೊಂಡ ಇವರು ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.