ಕೊಪ್ಪಳ

ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ

ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ

ಕಂಪ್ಲಿ: ಅಕ್ಷರ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸಬೇಕು ಜೊತೆಗೆ ಹಳೆಯ ಶಾಲೆ ಸ್ನೇಹಿತರನ್ನ ಭೇಟಿಯಾಗಬೇಕು ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ. ಆ ಕನಸು ನನಸು ಮಾಡೋದು ಅಷ್ಟು ಸುಲಭವಲ್ಲ. ಎಲ್ಲರನ್ನೂ ಒಟ್ಟಾಗಿ ಸೇರಿಸಿ, ಎಲ್ಲಾ ಶಿಕ್ಷಕರನ್ನ ಒಗ್ಗೂಡಿಸಿ ಒಂದೇ ವೇದಿಕೆ ಮೇಲೆ ಸನ್ಮಾನಿಸೋದು ಅತ್ಯಂತ ಕಷ್ಟಕರವಾದ ಕೆಲಸ. ಆದರೆ, ಪ್ರಯತ್ನ ಪಟ್ಟರೆ ಅದು ಕೂಡ ಸಾಧ್ಯ ಎಂಬುವುದನ್ನು ಸತ್ಯಾನಾರಾಯಣ ಪೇಟೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ.  . ನಿವೃತ್ತ ಮುಖ್ಯಶಿಕ್ಷಕರಾದ ರೇವಯ್ಯ ಇವರು ಸನ್ಮಾನಿಸಿ ಸ್ವೀಕರಿಸಿ ಮಾತನಾಡಿ, ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅಪಾರ ಸಂತಸ ತಂದಿದೆ ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡುವಂತೆ ಅವರು ಮನವಿ ಮಾಡಿದರು. ಸರ್ಕಾರಿ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಪೋಷಕರು ನೆರವಾಗಬೇಕೆಂದು ಕಿವಿಮಾತು ಹೇಳಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗುರುವಂದನಾ ಕಾರ್ಯಕ್ರಮದಲ್ಲಿ ಹಳೇಯ ಗೆಳೆಯ, ಗೆಳತಿಯೊಂದಿಗೆ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಸಮ್ಮಿಲನದ ಅಧ್ಯಕ್ಷ ರವಿ, ಉಪಾಧ್ಯಕ್ಷ ಬಿ.ನಾಗರಾಜ, ಕಾರ್ಯದರ್ಶಿಗಳಾದ ವಿಷ್ಣು, ಭಾಸ್ಕರ್, ಖಜಾಂಚಿ ಏಜಾಜ್, ಸದಸ್ಯರಾದ ಫಕ್ರುದ್ದೀನ್, ಎನ್‌.ಶ್ರೀನಿವಾಸ್, ದಾವೂದ್, ವೆಂಕಟೇಶ್, ಸೀನ, ಎ.ಶ್ರೀನಿವಾಸ್, ರಮೇಶ ಮಾವಿನಹಳ್ಳಿ, ವೀಣಾ, ಎನ್‌.ಸಾವಿತ್ರಿ, ಮಂಜುಶ್ರೀ, ಪಾರ್ವತಿ, ರಾಧಾ, ಕುಲಸಮ್ಮ, ಸಲ್ಮಾ, ವಿಜಯಲಕ್ಷ್ಮಿ, ಡಿ.ರೇಖಾ, ನಾಗಮಣಿ ಸೇರಿದಂತೆ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ