ಹಿರಿಯರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು : ರಫೀ ಬಂಡಾರಿ
ವಿಜಯಪುರ 04: ನಮ್ಮ ಜೀವನವೇ ನಮ್ಮ ಸಂದೇಶವೆಂಬ ವೇದ ವಾಕ್ಯದಿಂದ ಗಾಂಧೀಜಿಯವರು ನಡೆದುಕೊಂಡು ಬಂದಿದ್ದಾರೆ ಅದೇ ರೀತಿಯಾಗಿ ನಾವೆಲ್ಲರೂ ಹಿರಿಯರ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಹಿರಿಯ ಪತ್ರಕರ್ತರಾದ ರಫೀ ಬಂಢಾರಿ ಅವರು ಹೇಳಿದರು.
ನಗರದಲ್ಲಿ ಸುವಿಧಾ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂಧೀ ಹಾಗೂ ಲಾಲ್ ಬಹಾದ್ಧೂರ ಶಾಸ್ತ್ರೀ ಅವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡ ವಿಶ್ವಶಾಂತಿಗಾಗಿ ಮುಶಾಯಿರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಡತನ ಹಸಿವಿನಿಂದ ಮನುಷ್ಯ ಬಳಲುತ್ತಿರುವಾಗ ಒಬ್ಬ ಪ್ರಧಾನಿ ಲಾಲ ಬಹಾದ್ಧೂರ ಶಾಸ್ತ್ರೀ ಅವರು ಹಸಿವು ಹೇಗೆ ತಡೆದುಕೊಳ್ಳಬೇಕೆಂದು ತಾವು ಸ್ವತಃ ಉಪವಾಸ ಮಾಡಿ ಜಗತ್ತಿಗೆ ಮಾದರಿಯಾಗಿದ್ದಾರೆ. ಅದೇ ರೀತಿಯಾಗಿ ನಾವೆಲ್ಲರು ಆರೋಗ್ಯಕರವಾಗಿ ಜೀವನಕ್ಕಾಗಿ ನಿರ್ಧಾರ ತಗೆದುಕೊಳ್ಳಬೆಕಾಗಿದೆ. ನಾವೆಲ್ಲರೂ ಶಾಂತಿ, ಅಹಿಂಸೆ, ಸತ್ಯತೆಯಿಂದ ಜಗತ್ತನ್ನು ಗೆಲ್ಲಬೇಕಾಗಿದೆ. ಆದರೆ ಇಂದಿನ ಯುಗದಲ್ಲಿ ಪ್ರತಿಯೊಬ್ಬರಿಗೆ ಶಾಂತಿ ಎಂಬುದು ದೂರವಾದ ಮಾತಾಗಿದೆ. ಅವಸರದ ವೇಗದಲ್ಲಿ ಜಗತ್ತು ಸಾಗುತ್ತಿದೆ. ಅವಸರವೆಂಬುದು ಅಪಘಾತಕ್ಕೆ ಸೂಚನೆಯಾಗಿದೆ. ಅದಕ್ಕಾಗಿ ನಾವು ಏನೇ ನಿರ್ಧಾರ ತಗೆದುಕೊಂಡರೆ ಶಾಂತಿಯುತವಾಗಿ ಜೀವನದ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷರಾದ ಫಯಾಜ ಕಲಾದಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹ್ಮದ ನಸ್ಸೀಂ ರೋಜಿನದಾರ, ಶಬ್ಬೀರ ಪಿತಲಿ, ದಾದಾಪೀರ ಮುಜಾವರ, ಎಮ್.ಎಸ್. ಪಾಟೀಲ (ಗಣಿಯಾರ) ಪಿದಾಹುಸೇನ ಕಲಾದಗಿ, ರವಿ ಮುರಗೋಡ, ಮೀರಾಸಾಬ ಮುಲ್ಲಾ, ಐಜಾಜ ಮುಕ್ಬಿಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕವಿಗಳಾದ ಮೋಮೀನ್ ಬಿಜಾಪುರಿ, ಮುಜೀಬ್‌ಅಹಮ್ಮದ್ ಮುಜೀಬ, ಅಬ್ದುಲಖಾದಿರ ಸಾಹೀಲ, ರಿಜ್ವಾನ ಅಹಮ್ಮೆದ ರಿಜ್ವಾನ, ಇಕ್ಬಾಲ ಖಾದೀಮ, ಆಕೀಪ್ ರಜಾ ಮುಂತಾದವರು ಕವನ ವಾಚಿಸಿದರು.