ಯರಗಟ್ಟಿ

ಸೇವಾ ಸಂಕಲ್ಪ ಅಭಿಯಾನ: ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ

ಸೇವಾ ಸಂಕಲ್ಪ ಅಭಿಯಾನ: ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ

ಲೋಕದರ್ಶನ ವರದಿ 


ಯರಗಟ್ಟಿ 06 : ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ಹಾಗೂ ಭಾರತೀಯ ಜನತಾ ಪಾರ್ಟಿ ಸವದತ್ತಿ ಮಂಡಲ ವತಿಯಿಂದ ಸೇವಾ ಸಂಕಲ್ಪ ಅಭಿಯಾನದ ಅಡಿಯಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.  ರಕ್ತದಾನ ಶಿಬಿರಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಹಾಗೂ ಸವದತ್ತಿ ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಚಾಲನೆ ಮಾತನಾಡಿ ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಮಾನವೀಯ ಸೇವೆ. ಯುವಶಕ್ತಿ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಅಗತ್ಯವಿರುವವರಿಗೆ ನೆರವಾಗುವ ಮೂಲಕ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಮಾಜಿ ಮಂಡಳ ಅಧ್ಯಕ್ಷ ಈರಣ್ಣಾ ಚಂದರಗಿ, ಯುವ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ತೋರಗಲ್ಲ, ಮಲ್ಲೇಶ ಸುಳೆಬಾವಿ, ಮಹಾದೇವ ಮುರಗೋಡ, ವೆಂಕಟೇಶ ದೇವರಡ್ಡಿ, ಶಿವಾನಂದ ಹಣಸಿ, ಈರಣ್ಣಾ ವೀರಶೆಟ್ಪಿ, ಆನಂದ ಬಾಗೋಡಿ, ಸದಾನಂದ ಪಾಟೀಲ, ಮಹಾಂತೇಶ ಚನ್ನಪ್ಪನವರ, ಪ್ರವೀಣ ಬಿಷ್ಠನ್ನವರ, ರಾಜು ಸಾಲಿಮಠ, ಸದಾನಂದ ಹಣಬರ, ಮುದುಕಪ್ಪ ತಡಸಲೂರ, ವಿರೇಶ ಗುಡೆನ್ನವರ, ಮಹಾಂತೇಶ ಜಕಾತಿ, ಗೌಡಪ್ಪ ಸವದತ್ತಿ, ಶಿವಕುಮಾರ ಜಕಾತಿ, ಈರಣ್ಣಾ ಪೂಜೇರ, ಶಿವಾನಂದ ಪಟ್ಟಣಶೆಟ್ಟಿ, ಮುಖಂಡರು ಹಾಗೂ ಮಹಿಳಾ ಮೋರ್ಚಾದ ಸಕ್ಕಬಾಯಿ ಕುಂಬಾರ, ಜಯಶ್ರೀ ಗಾಣಗಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದು. 


ಸುದ್ದಿ ಓದಿ