ಕಾರವಾರ

ವಿಬಿ-ಜಿ ರಾಮ್‌-ಜಿ ಕಾಮಗಾರಿ ಪರೀವೀಕ್ಷಣೆ

ವಿಬಿ-ಜಿ ರಾಮ್‌-ಜಿ ಕಾಮಗಾರಿ ಪರೀವೀಕ್ಷಣೆ

ಲೋಕದರ್ಶನ ವರದಿ 


ಕಾರವಾರ 06:- ಮುಂಡಗೋಡ ತಾಲೂಕಿನ ಕಾತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ ಯೋಜನೆಯಡಿ ಜಾರಿಯಲ್ಲಿರುವ ಟ್ರೆಂಚ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್‌. ದಾಸನಕೊಪ್ಪ ಅವರು ಕಾಮಗಾರಿ ಪರೀಶೀಲಿಸಿದರು. 

ಬಳಿಕ ಕೂಲಿಕಾರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಮುಂಡಗೋಡ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದ್ದು, ಉತ್ತಮ ಅವಕಾಶ ಎಂಬಂತೆ ವಿಬಿ-ಜಿ ರಾಮ್‌-ಜಿ ಯೋಜನೆಯಡಿ ಮಾನವ ದಿನಗಳನ್ನು 125 ಕ್ಕೆ ವಿಸ್ತರಿಸಲಾಗಿದೆ. ಕೂಲಿ ಹಣವನ್ನು ಸಹ ಹೆಚ್ಚಿಸಲಾಗಿದ್ದು ಸದ್ಯ 382 ರೂ. ನೀಡಲಾಗುತ್ತಿದೆ. ಅರ್ಹ ಕುಟುಂಬಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಲಸೆಗಾಗಿ ಪರ ಊರಿಗೆ ವಲಸೆ ಹೋಗದೆ ಸ್ವಗ್ರಾಮದಲ್ಲಿಯೇ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕು ಎಂದರು.  


ಸುದ್ದಿ ಓದಿ