ತಾಳಿಕೋಟಿ

ಮಿಣಜಗಿ ಗ್ರಾಮ ಮಾರ್ಗವಾಗಿ ಬಸ್ಗಳ ಸಂಚಾರಕ್ಕೆ ಮನವಿ

ಮಿಣಜಗಿ ಗ್ರಾಮ ಮಾರ್ಗವಾಗಿ ಬಸ್ಗಳ ಸಂಚಾರಕ್ಕೆ ಮನವಿ


ತಾಳಿಕೋಟಿ 06 : ಬಸ್ ಘಟಕದಿಂದ ಮಿಣಜಗಿ ಗ್ರಾಮದ ಮಾರ್ಗವಾಗಿ ಮುದ್ದೇಬಿಹಾಳಕ್ಕೆ ಹೋಗುವ ರಸ್ತೆ ಸಾರಿಗೆ ಬಸ್ಸುಗಳು ಇತ್ತೀಚಿಗೆ ಹಡಗಿನಾಳ ಗ್ರಾಮದ ಮಾರ್ಗವಾಗಿ ಹೋಗುತ್ತಿರುವುದರಿಂದ ಮಿಣಜಗಿ ಗ್ರಾಮಸ್ಥರಿಗೆ ಅದರಲ್ಲಿಯೂ ತಾಳಿಕೋಟಿ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ವೃದ್ಧರಿಗೆ ಹಾಗೂ ಉದ್ಯೋಗಸ್ಥರಿಗೆ ತುಂಬಾ ತೊಂದರೆಯಾಗಿದ್ದೆ ಇದರ ಜೊತೆಗೆ ಬಿಜಾಪುರದಿಂದ ತಾಳಿಕೋಟೆಗೆ ಬರುವ ಬಸುಗಳು ಮಿಣಜಗಿ ಕ್ರಾಸ್ ನಲ್ಲಿ ನಿಲ್ಲದೇ ಇರೋದ್ರಿಂದ ವಿವಿಧ ಗ್ರಾಮಗಳಿಂದ ಮಿಣಜಗಿಗೆ ಬರುವವರಿಗೆ ತುಂಬಾ ತೊಂದರೆಯಾಗುತ್ತಿದೆ.ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ಒತ್ತಾಯಿಸಿ ಮಿಣಜಗಿ ಗ್ರಾಮಸ್ಥರು ಮುಖಂಡ ವೀರೇಶ ಬಾಗೇವಾಡಿ ಇವರ ನೇತೃತ್ವದಲ್ಲಿ ಘಟಕ ವ್ಯವಸ್ಥಾಪಕರಾದ ಪಿ.ಕೆ.ಜಾಧವ್ ಇವರಿಗೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿ ಮಾತನಾಡಿದ ಘಟಕ ವ್ಯವಸ್ಥಾಪಕ ಜಾಧವ ಅವರು ಸ್ಥಳದಲ್ಲಿಯೇ ಇದ್ದ ಸಂಚಾರ ನಿಯಂತ್ರಕ ಶೇಖರ ಕನ್ನೊಳ್ಳಿ ಇವರಿಗೆ ತಾಳಿಕೋಟಿಯಿಂದ ಮುದ್ದೇಬಿಹಾಳ ಮಾರ್ಗಕ್ಕೆ ಹೋಗುವ ಹೆಚ್ಚಿನ ಬಸ್ಸುಗಳನ್ನು ಹಡಗಿನಾಳ ಗ್ರಾಮದ ಮಾರ್ಗವಾಗಿ ಬಿಡದೆ ಮಿಣಜಗಿ ಮಾರ್ಗವಾಗಿ ಹೋಗುವ ವ್ಯವಸ್ಥೆಯನ್ನು ಮಾಡುವಂತೆ ಸೂಚನೆ ನೀಡಿದರು. ಈ ಸಮಯದಲ್ಲಿ ಮಿಣಜಗಿ ಗ್ರಾಮದ ಪ್ರಮುಖರಾದ ವಿರೇಶಗೌಡ ಬಾಗೇವಾಡಿ,ಸಂಗನಗೌಡ ಪಾಟೀಲ, ಐ. ವಾಯ್‌. ಹಿರೇಮಠ, ಎ.ಎಸ್‌. ಬಿರಾದಾರ, ಎಂ.ಜೆ.ಪಾಟೀಲ, ಕೆ.ಎ.ಪಾಟೀಲ, ಸಿ.ಎಂ.ಸಜ್ಜನ, ಐ. ಎಂ. ಯಾಳವಾರ, ಶರಣಗೌಡ ಬಿರಾದಾರ, ಈರಣ್ಣ ಮದರಿ, ಸೋಮು ನಾಯ್ಕೋಡಿ, ಎಂ ಆರ್ ಅಕ್ಕಿ ಬಿ.ಹೆಚ್‌.ಬಶೆಟ್ಟಿ, ಕೆ ಎಮ್ ಹಗರಟಗಿ, ರಾಮು ಜಂಬಗಿ, ಮಹಾಂತೇಶ ಮಂಗ್ಯಾಳ, ಶಿವು ಮಡಿಕೇಶ್ವರ ಮತ್ತಿತರರು ಇದ್ದರು. 


ಸುದ್ದಿ ಓದಿ